ಪುತ್ತೂರು, ಮಾ 27: ವಿಧಾನಸಭಾ ಚುನಾವಣೆ ಘೋಷಣೆಯಾಗಿ, ಮಾರ್ಚ್ 27ರಿಂದ ಮಂಗಳವಾರ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆಯಲ್ಲಿ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಸರ್ಕಾರಿ ವಾಹನ ತೊರೆದು ಖಾಸಗಿ ಬಸ್ ಏರಿದ ಘಟನೆ ಪಾಣಾಜೆ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಬಂದಿದ್ದ ವೇಳೆ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಜಾರಿಯಾದ ಕಾರಣದಿಂದ ಮರಳಿ ಪುತ್ತೂರು ತೆರಳಬೇಕಾಗಿದ್ದ ಇವರು, ಪಾಣಾಜೆಯಿಂದ ಪುತ್ತೂರು ಗೆ ಬರುವ ಖಾಸಗಿ ಬಸ್ ಗೆ ಕಾದು ನಿಂತು, ಬಸ್ ಏರಿ ಟಿಕೆಟ್ ಪಡೆದು ಪುತ್ತೂರಿಗೆ ಪಯಣ ಬೆಳೆಸಿದರು.ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಕೃಷ್ಣಪ್ರಸಾದ್ ಆಳ್ವ, ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಶಿವಾನಂದ ಮಣಿಯಾಣಿ ಶಾಸಕರ ಜೊತೆಯಲ್ಲಿದ್ದರು.