ಉಡುಪಿ, ಜೂ 06 (DaijiworldNews/PY) : ಜೂನ್ 8 ರಿಂದ ದೇವಾಲಯಗಳನ್ನು ತೆರೆಯಲು ಸರಕಾರ ಅವಕಾಶ ನೀಡಿದ್ದರೂ ಕೂಡಾ ಉಡುಪಿಯ ಎಂದು ಉಡುಪಿ ಪರ್ಯಾಯ ಶ್ರೀ ಅದಮಾರು ಮಠದ ಕಿರಿಯ ಯತಿಗಳಾದ ಶ್ರೀ ಈಶಪ್ರಿಯ ತೀರ್ಥ ಸ್ವಾಮಿಜಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕೊರೊನಾ ವೈರಸ್ ಹಾವಳಿಯಿಂದ ಜನರು ಬಳಲುತಿದ್ದಾರೆ, ಸರಕಾರಗಳು, ಆರೋಗ್ಯ ಇಲಾಖೆ, ಪೋಲಿಸ್ ಇಲಾಖೆ ಸೋಂಕಿನ ತಡೆಗಾಗಿ ಉತ್ತಮವಾಗಿ ಕೆಲಸ ಮಾಡುತಿದ್ದಾರೆ. ಶ್ರೀ ಕೃಷ್ಣಮಠದಲ್ಲಿ ಮುಂದಿನ 20 ರಿಂದ 30 ದಿನಗಳ ತನಕ ಕಾದು ನೋಡಿ ಮುಂದಿನ ನಿರ್ಧಾರವನ್ನು ತಿಳಿಸಲಾಗುವುದು. ಮಠದಲ್ಲಿ ದರ್ಶನಕ್ಕೆ ಬೆಂಗಳೂರು ಹಾಗೂ ಬೇರೆ ಬೇರೆ ಕಡೆಗಳಿಂದ ಜನರು ದರ್ಶನಕ್ಕೆ ಬರಲು ತಯಾರಾಗಿದ್ದಾರೆ ಭಕ್ತರ ಆರೋಗ್ಯದ ದೃಷ್ಟಿಯಿಂದ ಮತ್ತು ನಮ್ಮ ಸಿಬ್ಬಂದಿಗಳ ಆರೋಗ್ಯವನ್ನು ಕಾಪಾಡುವ ದೃಷ್ಟಿಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿಸಿದರು.
ಈಗ ಮಠದಲ್ಲಿ ಸುಮಾರು 150 ರಷ್ಟು ಸಿಬ್ಬಂದಿಗಳು ಕೆಲಸದಲ್ಲಿ ನಿರತರಾಗಿದ್ದಾರೆ. ಪ್ರತಿ ತಿಂಗಳ ಸಂಬಳವನ್ನುಇವರೆಲ್ಲರಿಗೂ ನೀಡುತ್ತಾ ಬಂದಿದ್ದೇವೆ. ಇದೇ ಸಂಧರ್ಭ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ಕೂಡಾ ಪ್ರತಿದಿನ ಪೂಜೆ-ಪುನಸ್ಕಾರಗಳು ನಡೆಯುತ್ತಾ ಇವೆ. ಮುಂದಿನ ಪರಿಸ್ಥಿತಿಯನ್ನು ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ. ಈಗ ಮಠದ ವತಿಯಿಂದ ಆರೋಗ್ಯ ಇಲಾಖೆಗೆ ಮತ್ತು ಮಠದ ಸಿಬ್ಬಂದಿಗಳಿಗೆ ಪ್ರತಿ ದಿನ ಊಟದ ವ್ಯವಸ್ಥೆ ಕೂಡಾ ನಡೆಯುತ್ತಿದೆ ಎಂದು ಶ್ರೀಗಳು ಮಾಹಿತಿ ನೀಡಿದ್ದಾರೆ.