ಮಂಗಳೂರು, ಜೂ 06 (DaijiworldNews/PY) : ಜೂನ್ 8ರಿಂದ ಮಸೀದಿಯೂ ಕಾರ್ಯಾರಂಭವಾಗಲಿದೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವು ನಿಯಮಗಳಿವೆ ಎಂದು ದ.ಕ ಖಾಝಿ ಪಿ.ಎಮ್. ಇಬ್ರಾಹಿಂ ಮುಸ್ಲಿಯಾರ್ ಆದೇಶ ಹೊರಡಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಈ ಬಗ್ಗೆ ಮಾಹಿತಿ ನೀಡಿದ ಅವರು, ಶೀತ, ಕೆಮ್ಮು ಇದ್ದವರಿಗೆ ನಮಾಝ್ಗೆ ಪ್ರವೇಶವಿಲ್ಲ. ಸಾಬೂನಿನಿಂದ ಕೈತೊಳೆದು ಮಸೀದಿ ಪ್ರವೇಶಿಸಬೇಕು. ಅಲ್ಲದೇ, ನಮಾಝ್ನ ಸಂದರ್ಭ ಸಾಮಾಜಿಕ ಅಂತರ ಕಡ್ಡಾಯ ಎಂದು ತಿಳಿಸಿದ್ದಾರೆ.
ನಮಾಝ್ಗೆ ಬೇಕಾದ ಛಾಪೆ ಮನೆಯಿಂದಲೇ ತರಬೇಕು. ಊರವರಿಗೆ ಮಾತ್ರ ಆಯಾ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶ. ಪ್ರಾರ್ಥನೆ ಸಂದರ್ಭದಲ್ಲಿ ಮಾತ್ರ ಮಸೀದಿಯನ್ನು ತೆರೆಯಬೇಕು ಎಂದು ಹೇಳಿದ್ದಾರೆ.