ಮಂಗಳೂರು, ಜೂ 06 (DaijiworldNews/PY) : ದೇವಸ್ಥಾನ ತೆರೆದಲ್ಲಿ ಅತೀ ಹೆಚ್ಚು ಭಕ್ತಾದಿಗಳು ಆಗಮಿಸುವ ಸಾಧ್ಯತೆ ಇರುವ ಹಿನ್ನೆಲೆ ಜೂ.8ರ ಸೋಮವಾರದಿಂದ ಸೋಮವಾರದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ ತೆರೆಯದಿರಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧಾರಮಾಡಿದೆ.
ಜನಸಂದಣಿಯನ್ನು ಹತೋಟಿಗೆ ತರುವ ಸಾಧ್ಯತೆಗಳು ತೀರ ಕಡಿಮೆ ಹಿನ್ನೆಲೆ ಆನ್ ಲೈನ್ನಲ್ಲಿ ದರ್ಶನಕ್ಕೆ ಉಚಿತ ಟಿಕೆಟ್ ಪಡೆಯುವ ವ್ಯವಸ್ಥೆ ಮಾಡಲಾಗುತ್ತದೆ. ಭಕ್ತಾಧಿಗಳ ದರ್ಶನಕ್ಕೆ ಟಿಕೆಟ್ ಮೂಲಕ ವ್ಯವಸ್ಥೆಗಾಗಿ ಸಾಫ್ಟ್ ವೇರ್ ಬಳಕೆ ಮಾಡಲಾಗುತ್ತದೆ. ನೂತನ ಸಾಫ್ಟ್ವೇರ್ ಅಭಿವೃದ್ದಿಪಡಿಸಿದ ಬಳಿಕ ದೇವಸ್ಥಾನ ತೆರೆಯಲು ಚಿಂತನೆಮಾಡಲಿದ್ದು, ಎಲ್ಲಾ ವ್ಯವಸ್ಥೆಗಳನ್ನು ಸಜ್ಜುಗೊಳಿಸಿ ದೇವಸ್ಥಾನ ತೆರೆಯಲು ನಿರ್ಧಾರ ಮಾಡಲಾಗಿದೆ. ಹಾಗಾಗಿ ಜೂ.8ರ ಸೋಮವಾರದಿಂದ ದೇವಸ್ಥಾನಕ್ಕೆ ಭಕ್ತರ ಪ್ರವೇಶವಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ.