ಕಾಸರಗೋಡು, ಜೂ. 07 (DaijiworldNews/MB) : ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 10 ಮಂದಿಗೆ ಕೋವಿಡ್ 19 ಸೋಂಕು ಪಾಸಿಟಿವ್ ಆಗಿದೆ. ಒಬ್ಬರು ರೋಗದಿಂದ ಗುಣಮುಖರಾಗಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕು ಬಾಧಿತರ ಸಂಖ್ಯೆ 112 ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಕೇಸ್ ಗಳು-ವಿದೇಶದಿಂದ ಬಂದವರು
ಕುವೈತ್ ನಿಂದ ಆಗಮಿಸಿದ್ದ ಕೋಡೋಂ-ಬೇಳೂರು ಗ್ರಾಮಪಂಚಾಯತ್ ನಿವಾಸಿ 37 ವರ್ಷದ ವ್ಯಕ್ತಿ, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನಿವಾಸಿ 40 ವರ್ಷದ ವ್ಯಕ್ತಿ, ಅಬುದಾಭಿಯಿಂದ ಬಂದಿದ್ದ 32 ವರ್ಷದ ವ್ಯಕ್ತಿ, ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ನಿವಾಸಿ 31 ವರ್ಷದ ವ್ಯಕ್ತಿ, ದುಬಾಯಿಯಿಂದ ಆಗಮಿಸಿದ್ದ ಕುಂಬಳೆ ನಿವಾಸಿ 39 ವರ್ಷದ ವ್ಯಕ್ತಿ, ಇವರ 8 ವರ್ಷದ ಪುತ್ರ ಇವರಿಗೆ ಸೋಂಕು ತಗುಲಿದೆ.
ಮಹಾರಾಷ್ಟ್ರದಿಂದ ಆಗಮಿಸಿದವರು
ಮಹಾರಾಷ್ಟ್ರದಿಂದ ಆಗಮಿಸಿದ್ದ ಪುತ್ತಿಗೆ ಗ್ರಾಮಪಂಚಾಯತ್ ನಿವಾಸಿ 47 ವರ್ಷದ ನಿವಾಸಿ, ಕುಂಬಡಾಜೆ ನಿವಾಸಿ 34 ವರ್ಷದ ಮಹಿಳೆ(ಇವರ ಪತಿ ಸೋಂಕು ಖಚಿತಗೊಂಡು ಈಗಾಗಲೇ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬದಿಯಡ್ಕ ನಿವಾಸಿ 26 ವರ್ಷದ ವ್ಯಕ್ತಿ, ಮಂಗಲ್ಪಾಡಿನಿವಾಸಿ 43 ವರ್ಷದ ವ್ಯಕ್ತಿ ಸೋಂಕು ಖಚಿತಗೊಂಡವರು.
ನೆಗೆಟಿವ್ ಕೇಸ್
ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ, ಮೇ 29ರಂದು ಸೋಂಕು ಖಚಿತಗೊಂಡಿದ್ದ, ಮಂಗಲ್ಪಾಡಿ ನಿವಾಸಿ 31 ವರ್ಷದ ವ್ಯಕ್ತಿ ರೋಗದಿಂದ ಗುಣಮುಖರಾಗಿದ್ದಾರೆ.
ನಿಗಾದಲ್ಲಿ 3713 ಮಂದಿ
ಕಾಸರಗೋಡು ಜಿಲ್ಲೆಯಲ್ಲಿ 3713 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 3021 ಮಂದಿ, ಆಸ್ಪತ್ರೆಗಳಲ್ಲಿ 692 ಮಂದಿ ನಿಗಾದಲ್ಲಿದ್ದಾರೆ. 7154 ಮಂದಿಯ ಸ್ಯಾಂಪಲ್ ತಪಾಸಣೆಯ ಫಲಿತಾಂಶ ನೆಗೆಟಿವ್ ಆಗಿದೆ. 615 ಮಂದಿಯ ಫಲಿತಾಂಶ ಲಭಿಸಿಲ್ಲ. ಶನಿವಾರ ನೂತನವಾಗಿ 423 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.