ಕುಂದಾಪುರ, ಸೆ19: ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯ ಶಿಕ್ಷಕ ಪೊಲೀಸರ ಅತಿಥಿಯಾದ ಘಟನೆ ಕುಂದಾಪುರ ತಾಲೂಕಿನ ಹಳ್ಳಿಹೊಳೆ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.
ಶಾಲೆಯಲ್ಲಿ ಮುಖ್ಯ ಶಿಕ್ಷಕರಾದ ಶ್ರೀನಿವಾಸ ಜೋಷಿ ತನ್ನ ಖಾಸಗಿ ಅಂಗಗಳನ್ನು ಮುಟ್ಟುತ್ತಾರೆ. ನನಗೆ ಶಾಲೆಯಲ್ಲಿ ಮುಜುಗರವಾಗುತ್ತಿದೆ. ನನಗೆ ಬೇರೆ ಶಾಲೆಗೆ ಸೇರಿಸಿ ಎಂದು ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಇದನ್ನು ಗಂಭೀರವಾಗಿ ಪರಿಗಣಿಸದ ಪೋಷಕರು ಸುಮ್ಮನಿರುವಂತೆ ಜೋರು ಮಾಡಿದ್ದರು. ಆದರೆ ಈ ಘಟನೆಯಿಂದ ಮಗಳು ಮಂಕಾಗಿರುವುದು ಮತ್ತು ನಾನು ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೋಷಕರು ಶಾಲೆಗೆ ಬಂದು ವಿಚಾರಿಸಿದ್ದಾರೆ.
ಶಾಲೆಯಲ್ಲಿ ವಿಚಾರಿಸಿದಾಗ ಕಾಮುಕ ಶಿಕ್ಷಿಕನ ಬಣ್ಣ ಬಯಲಾಗಿದ್ದು ಈ ಬಗ್ಗೆ ಪೋಷಕರು ಎಸ್ಡಿಎಂಸಿಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂದರ್ಭ ತಾನು ಮಾಡಿದ ತಪ್ಪನ್ನು ಮುಖ್ಯ ಶಿಕ್ಷಕ ಒಪ್ಪಿಕೊಂಡಿದ್ದಾನೆ. ಈ ಕುರಿತು ಶಂಕರನಾರಾಯಣ ಠಾಣೆಯಲ್ಲಿ ಫೋಕ್ಸೊ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು, ಠಾಣೆ ಪೊಲೀಸರು ಆರೋಪಿ ಮುಖ್ಯ ಶಿಕ್ಷಕನನ್ನು ಬಂಧಿಸಿದ್ದಾರೆ.