ಮಾ,28: ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ ಎಂಬ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ 10ನೇ ತರಗತಿಯ ಗಣಿತ ಹಾಗೂ 12ನೇ ತರಗತಿಯ ಅರ್ಥಶಾಸ್ತ್ರ ಪರೀಕ್ಷೆಯನ್ನು ಮತ್ತೊಮ್ಮೆ ನಡೆಸಲು ಸಿಬಿಎಸ್ಇ ಮುಂದಾಗಿದೆ. ಈ ಸಂಬಂಧ ಸಿಬಿಎಸ್ಇ ಅಧಿಕೃತ ಪ್ರಕಟನೆಯೊಂದನ್ನು ಹೊರಡಿಸಿ ಮರು ಪರೀಕ್ಷೆಯ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದಿದೆ. ಆದರೆ, ಈ ಪರೀಕ್ಷೆಗಳ ದಿನಾಂಕವನ್ನು ಸಿಬಿಎಸ್ಇ ಪ್ರಕಟಿಸಿಲ್ಲ. ಹೊಸ ಪರೀಕ್ಷೆಯ ದಿನಾಂಕ ಮತ್ತಿತರ ಮಾಹಿತಿಯನ್ನು ವಾರದೊಳಗೆ ತಿಳಿಸಲಾಗುವುದು ಎಂದು ಸಿಬಿಎಸ್ಇ ಪ್ರಕಟಣೆ ತಿಳಿಸಿದೆ.
ಸಿಬಿಎಸ್ಇ ಪರೀಕ್ಷೆಗಳಿಗೆ ಈ ಬಾರಿ 28 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಕುಳಿತಿದ್ದಾರೆ.ಈ ಪೈಕಿ ಹತ್ತನೇ ತರಗತಿಯ ಪರೀಕ್ಷೆಗೆ 16,38,429 ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ. 12ನೇ ತರಗತಿಯ ಪರೀಕ್ಷೆಗಳಿಗೆ 11,86,306 ಅಭ್ಯರ್ಥಿಗಳು ನೋಂದಾವಣೆ ಮಾಡಿಕೊಂಡಿದ್ದಾರೆ.