ಮಾ, 29: ಡಾ. ಭೀಮ್ ರಾವ್ ಅಂಬೇಡ್ಕರ್ ಅವರ ನಾಮಧೇಯದ ಮುಂದೆ ರಾಮ್ ಜೀ ಎಂದು ಯೋಗಿ ಆದಿತ್ಯ ನಾಥ್ ನಾಯಕತ್ವದ ಉತ್ತರ ಪ್ರದೇಶದ ಬಿಜೆಪಿ ಸರಕಾರ ಹೊಸ ಸೇರ್ಪಡೆ ಮಾಡಿದೆ. ಇದಕ್ಕಾಗಿ ಯೋಗಿ ಸರ್ಕಾರ ಉತ್ತರಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್ ಅವರಿಗೆ ಶಿಫಾರಸು ಮಾಡಿದೆ. ಅಂಬೇಡ್ಕರ್ ಅವರ ಹೆಸರಿನ ನಡುವೆ ರಾಮ್ ಜೀ ಎನ್ನುವ ಹೆಸರನ್ನು ಸೇರಿಸುವ ಇರಾದೆ ಯೋಗಿ ಸರ್ಕಾರದ್ದು. ಹೀಗಾಗಿ ಇನ್ನು ಮುಂದೆ ಉ.ಪ್ರ ಸರಕಾರದ ಎಲ್ಲಾ ಅಧಿಕೃತ ಪತ್ರ ವ್ಯವಹಾರಗಳಲ್ಲಿ ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಎಂಬ ಹೆಸರು ಕಾಣಿಸಿಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಇನ್ನು ಹೆಸರು ಬದಲಾವಣೆ ಕುರಿತಂತೆ ಕಿಡಿಕಾರಿರುವ ಎಸ್ಪಿ ದಲಿತ ನಾಯಕರನ್ನು ರಾಜಕೀಯಕರಣ ಗೊಳಿಸಲು ಬಿಜೆಪಿ ಮುಂದಾಗಿದೆ ಎಂದಿದೆ. ಇನ್ನು ರಾಮ ಜೀ ಎನ್ನುವುದು ಅಂಬೇಡ್ಕರ್ ಅವರ ತಂದೆಯ ಹೆಸರು ಆಗಿದೆ.