ಮಂಗಳೂರು, ಜೂ.09 (DaijiworldNews/MB) : ಕೊರೊನಾ ಕಾರಣದಿಂದಾಗಿ ಸಂಕಷ್ಟದಲ್ಲಿ ಸಿಲುಕಿದ ನಾನಾ ರಾಜ್ಯದ ವಲಸೆ ಕಾರ್ಮಿಕರಿಗೆ ಮಂಗಳೂರಿನ ಸಮಾಜ ಸೇವಾ ಸಂಸ್ಥೆ ಟೀಮ್ ಬಿ-ಹ್ಯೂಮನ್ ವತಿಯಿಂದ ಬಟ್ಟೆಬರೆ ಹಾಗೂ ಪಾದರಕ್ಷೆಗಳನ್ನು ವಿತರಿಸಲಾಯಿತು.
ಕೊರೊನಾ ಲಾಕ್ಡೌನ್ ಜಾರಿಯಲ್ಲಿದ್ದ ಸಂದರ್ಭದಲ್ಲಿ ವಲಸೆ ಕಾರ್ಮಿಕರಿಗೆ ತಾವು ಇರುವ ಸ್ಥಳಗಳಿಗೆ ತೆರಳಿ ಪ್ರತಿದಿನ ಆಹಾರ ಪೊಟ್ಟಣ, ಅರ್ಹ ಕುಟುಂಬಗಳಿಗೆ ಕೋವಿಡ್ ಕಿಟ್ ಮತ್ತು ರಂಜಾನ್ ಕಿಟ್ ವಿತರಿಸಿದ್ದ ಈ ಸಂಸ್ಥೆಯು ಜನರಿಗೆ ವೈದ್ಯಕೀಯ ನೆರವು ಕೂಡಾ ನೀಡಿದೆ.
ಇದೀಗ ಊರಿಗೆ ತೆರಳದೆ ಮಂಗಳೂರಿನಲ್ಲೇ ಉಳಿದರುವ ವಲಸೆ ಕಾರ್ಮಿಕರ ಕುಟುಂಬಕ್ಕೆ ಬಟ್ಟೆಬರೆ ಹಾಗೂ ಪಾದರಕ್ಷೆಗಳನ್ನು ವಿತರಿಸಿದ್ದಾರೆ.