ಮಂಗಳೂರು, ಮಾ 29 : ನಗರದ ಪಣಂಬೂರಿನ ಮಂಗಳಾ ಕೆಮಿಕಲ್ಸ್ ಆಂಡ್ ಫರ್ಟಿಲೈಸರ್ಸ್ ಕಾರ್ಖಾನೆ ಮುಂದಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಾ 28 ರ ಬುಧವಾರ ತಡರಾತ್ರಿ ನಿಂತಿದ್ದ ಟ್ರಕ್ಗೆ ಇನ್ನೋವಾ ಡಿಕ್ಕಿ ಹೊಡೆದಿದ್ದು, ಕಾರಿನ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ ಕಾರಿನಲ್ಲಿ ಸಂಚರಿಸುತ್ತಿದ್ದ ಎಂಟು ಮಂದಿ ಗಾಯಗೊಂಡಿದ್ದಾರೆ. ಮೃತರನ್ನು ಕಾರು ಚಾಲಕ ಹನುಮಂತಯ್ಯ ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದವರು ಕೇರಳದ ಗುರುವಾಯೂರು ಕಡೆಗೆ ಸಂಚರಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕಾರಿನಲ್ಲಿದ್ದವರು ಗದಗ ಮೂಲದ ನಿವಾಸಿ, ಪತ್ರಕರ್ತರಾದ ವಿ.ಬಿ.ಹಿರೇಮಠ ಮತ್ತು ಪ್ರಸನ್ನ ಹಿರೇಮಠ ಅವರ ಕುಟುಂಬದವರಿದ್ದು ಒಟ್ಟು 9 ಮಂದಿ ಸಂಚರಿಸುತ್ತಿದ್ದರು. ಇವರಲ್ಲಿ ನಾಲ್ಕು ಮಕ್ಕಳಾಗಿದ್ದು ಗಾಯಾಳುಗಳನ್ನು ನಗರದ ಎ.ಜೆ.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.