ಮಂಗಳೂರು, ಜೂ 09 (DaijiworldNews/SM): ಹೊರ ರಾಜ್ಯದಿಂದ ಬಂದವರಿಗೆ ಜೂನ್ 9ರ ಮಂಗಳವಾರದಿಂದ ಹೋಂ ಕ್ವಾರಂಟೈನ್ ಮಾತ್ರ ಎಂದು ರಾಜ್ಯ ಸರಕಾರ ಆದೇಶ ನೀಡಿದೆ. ಆದರೆ, ಉಳ್ಳಾಲದ ವ್ಯಾಪ್ತಿಯವರಿಗೆ ಮಾತ್ರ ಕಡ್ಡಾಯ ಸಾಂಸ್ಥಿಕ ಕ್ವಾರೈಂಟೈನ್ ವಿಧಿಸುವ ಯೋಜನೆಯನ್ನು ಮಾಜಿ ಸಚಿವ ಖಾದರ್ ಮಾಡಿಕೊಂಡಿದ್ದಾರೆ.
ಯಾವುದೇ ರಾಜ್ಯದಿಂದ ಬಂದವರಿಗೆ ಉಳ್ಳಾಲದಲ್ಲಿ ಕ್ವಾರೈಂಟೈನ್ ವ್ಯವಸ್ಥೆ ಮಾಡಲಾಗಿದೆ. ನಗರ ಸಭೆ ಜನರನ್ನು ಕರೆದು ಚರ್ಚೆ ಮಾಡಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಬೆಳ್ಮಾ ಗ್ರಾಮದಲ್ಲಿ ನೋಡಲ್ ಕಚೇರಿಯನ್ನೂ ಕೂಡ ಆರಂಭಿಸಲಾಗಿದೆ. ಕ್ವಾರೈಂಟೈನ್ ವ್ಯವಸ್ಥೆಗೆ ನೋಡಲ್ ಅಧಿಕಾರಿಯನ್ನು ಕೂಡ ನೇಮಕ ಮಾಡಲಾಗಿದೆ.
ಈಗಾಗಲೇ 100ಕ್ಕೂ ಅಧಿಕ ಮಂದಿಗೆ ಕ್ವಾರೈಂಟೈನ್ ವ್ಯವಸ್ಥೆ ಮಾಡಲಾಗಿದೆ. ಊಟದ ವ್ಯವಸ್ಥೆಯನ್ನು ಕ್ವಾರಂಟೈನ್ ನಲ್ಲಿದ್ದವರ ಕುಟುಂಬಸ್ಥರೆ ತಂದು ಕೊಡಲು ಸೂಚನೆ ನೀಡಲಾಗಿದೆ. ಮಂಗಳೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ರಾಜ್ಯದ ಯಾವುದೇ ಭಾಗಗಳಲ್ಲಿ ಸಂಕಷ್ಟದಲ್ಲಿದ್ದರೂ ಮರಳುವಂತೆ ಮಾಜಿ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಊರಿಗೆ ಮರಳುವವರಿಗೆ ಸೂಕ್ತ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ನೇರವಾಗಿ ಮನೆಗೆ ಹೋಗದೆ ಇಲ್ಲಿಗೆ ಬನ್ನಿ ಕ್ವಾರೈಂಟೈನ್ ನಾವು ಮಾಡುತ್ತೇವೆ ಎಂದು ಶಾಸಕ ಖಾದರ್ ತಿಳಿಸಿದ್ದಾರೆ.