ವಿಟ್ಲ, ಜೂ 09 (DaijiworldNews/SM): ಯುವತಿಯೊಬ್ಬಳನ್ನು ಆಕೆಯ ಸ್ನೇಹಿತೆ ಕರೆದುಕೊಂಡು ಹೋಗಿದ್ದು, ಇದುವರೆಗೂ ಮನೆಗೆ ಬಾರದೇ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ಪೆರುವಾಯಿ ಗ್ರಾಮದ ಕಂಬಕೋಡಿ ನಿವಾಸಿ 23 ವರ್ಷದ ಯುವತಿ ಸದ್ಯ ನಾಪತ್ತೆಯಾದವಳು. ಈಕೆಯನ್ನು ಮೇ 29ರಂದು ಆಕೆಯ ಸ್ನೇಹಿತೆ ಕರೆದುಕೊಂಡು ಹೋಗಿದ್ದಳು. ಬಳಿಕ ಮಧ್ಯಾಹ್ನ ಮನೆಗೆ ಕರೆ ಮಾಡಿ ಸ್ನೇಹಿತೆ ನನ್ನ ಜತೆ ಬಂದಿದ್ದಾಳೆ. ಮೂರು ದಿನದ ಬಳಿಕ ಕಳುಹಿಸಿಕೊಡುತ್ತೇನೆ ಎಂದು ತಿಳಿಸಿದ್ದಳು.
ಆದರೆ ಇದುವರೆಗೂ ಆಕೆ ಮನೆಗೆ ಹಿಂದಿರುಗಿ ಬಂದಿಲ್ಲ ಎಂದು ಆಕೆಯ ತಂದೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗ್ಗೆ ಪ್ರಕರಣ ದಾಖಲಿಸಿಕೊಂಡ ವಿಟ್ಲ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.