ಉಡುಪಿ, ಮಾ 29 : ಚುನಾವಣೆಯ ಸಂದರ್ಭ ಜನರಿಗೆ, ನಾನು ನೀಡಿರುವ ಆಶ್ವಾಸನೆಯಂತೆ ನಾನು ಎಲ್ಲೂ ಜನರ ತಲೆ ತಗ್ಗಿಸುವ ಕೆಲಸ ಮಾಡಿಲ್ಲ. ಈ ಹಿಂದಿನ ಮಾಜಿ ಶಾಸಕರು ಉಡುಪಿಯ ಜನತೆಯ ತಲೆ ತಗ್ಗಿಸುವ ಕೆಲಸ ಮಾಡಿದ್ದಾರೆ. ನಾನು ನೀಡಿರುವ 2025 ರ ಅವಧಿ ಇನ್ನೂ ಮುಗಿಯದಿದ್ದರೂ ನಾನು ಜನರಿಗೆ ನೀಡಿರುವ ವಿಷನ್ 2025 ಯಲ್ಲಿ ನೀಡಿರುವ ಬಹುತೇಕ ಭರವಸೆ ಈಗಾಗಲೇ ಈಡೇರಿಸಿದ್ದೇನೆ.
ನಂತರ ಬೇಕಿದ್ದರೆ ಬಿಜೆಪಿ ನನ್ನ ಮೆಲೆ ಆರೋಪ ಹೊರಿಸಲಿ.ಜಿಲ್ಲಾ ಆಸ್ಪತ್ರೆಯನ್ನು ಮೇಲ್ದರ್ಜೆಗೆ , ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಆಶ್ವಾಸನೆ ಈಡೇರಿಸಿಲ್ಲ ಎಂದು ಮಾಜಿ ಶಾಸಕರು ನನ್ನ ಮೇಲೆ ಆಪಾದನೆ ಹೊರಿಸಿದ್ದಾರೆ. 13 ಕೊಟಿ ರೂಪಾಯಿ ಜಿಲ್ಲಾ ಅಸ್ಪತ್ರೆಗೆ ನಮ್ಮ ಸರಕಾರ ಅನುದಾನ ನೀಡಿದೆ. ಅಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಕೇಂದ್ರ ಸರಕಾರದ ಹೆಚ್ಚಿನ ಅನುದಾನ ಅಗತ್ಯವಿದೆ ಎಂದರು . ನಾನು ಭರವಸೆ ನೀಡಿರುವ ಸಂದರ್ಭ ನಮ್ಮ ಸರಕಾರ ಕೇಂದ್ರದಲ್ಲಿ ಆಡಳಿತದಲ್ಲಿತ್ತು. ನಂತರ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂತು. ಅನುದಾನ ನೀಡಬೇಕಾದ ಕೇಂದ್ರ ಸರಕಾರ, ಆಸ್ಪತ್ರೆಯ ಅಭಿವೃದ್ದಿಗೆ ಅನುದಾನ ನೀಡುತ್ತಿಲ್ಲ. ಈ ಕಾರಣದಿಂದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಅಭಿವೃದ್ದಿ ಕೆಲಸ ಕುಂಠಿತಗೊಂಡಿದೆ. ಇನ್ನೂ ಕೇಂದ್ರದಿಂದ ಉಡುಪಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ತರಬೇಕಾಗಿದ್ದ ಸಂಸದೆ ಶೋಭಾ ಕರದ್ಲಾಂಜೆ ಈ ವಿಚಾರದಲ್ಲಿ ಮೌನವಾಗಿದ್ದಾರೆ.
ಕ್ಷೇತ್ರದ ಅಭಿವೃದ್ದಿ ವಿಚಾರದಲ್ಲಿ ಸಂಸದೆ ವಿಫಲವಾಗಿದ್ದಾರೆ. ಹೀಗಿರುವಾಗ ಬಿಜೆಪಿ ನನ್ನ ಮೇಲೆ ಆರೋಪವನ್ನು ಮಾಡುವುದನ್ನು ಬಿಟ್ಟು ಸಂಸದೆ ಕಾರ್ಯ ವೈಖರಿಯನ್ನು ಪ್ರಶ್ನಿಸಲಿ ಎಂದು ಕಿಡಿಕಾರಿದರು.
ರಸ್ತೆಯನ್ನು ಅಗತ್ಯವಿದ್ದ ಕಡೆಯಲ್ಲಿ ಚತುಷ್ಪಥ ಮಾಡಲಾಗಿದೆ. ಇನ್ನೂ ಕೆಲವು ಕಡೇ ಟೆಂಡರ್ ಪ್ರಕ್ರಿಯೆಯಲ್ಲಿದೆ. ಆರೋಪ ಮಾಡುವ ರಘುಪತಿ ಭಟ್ ಅವರ ಹೈಟೆಕ್ ಹೋಟೆಲ್ ಬಳಿಯ ರಸ್ತೆ ಚತುಷ್ಪಥ ಆಗಿರುವುದು ಅವರ ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ್ರು. ಇನ್ನೂ ಕ್ರೀಡಾ ಕಿಟ್ ವಿತರಣೆಯಲ್ಲಿ ಅವವ್ಯಹಾರ ನಡೆದಿದೆ ಎಂಬ ರಘುಪತಿ ಭಟ್ ಅವರ ಆರೋಪಕ್ಕೂ ಕೂಡಾ ಸಚಿವರು ಪ್ರತಿಕ್ರಿಯಿಸಿ ಮಾತನಾಡಿದ್ರು , ಪ್ರಾಮಾಣಿಕ ರೀತಿಯಲ್ಲಿ ಕಿಟ್ ವಿತರಣೆ ಮಾಡಿದ್ದೇನೆ. 15 ಸಾವಿರ ಮೊತ್ತದಲ್ಲಿ ಕ್ರೀಡಾ ಕಿಟ್ ಸಿಗುವುದಾದ್ರೆ ಮುಂದಿನ ದಿನಗಳಲ್ಲಿ ರಘುಪತಿ ಭಟ್ ಅವರೇ ಇದರ ಟೆಂಡರ್ ವಹಿಸಿ ಕ್ರೀಡಾಕಿಟ್ ವಿತರಣೆ ಮಾಡುವ ಜವಾಬ್ದಾರಿ ವಹಿಸಲಿ ಎಂದ್ರು. ಬಿಜೆಪಿ ಈ ಹಿಂದೆ ಹೊರಿಸಿದ್ದ 19 ಆರೋಪಗಳಿಗೆ ಸಚಿವರು ಇಂದು ಸುದ್ದಿಗೋಷ್ಟಿ ಮೂಲಕ ಖಡಕ್ ಆಗಿ ಉತ್ತರಿಸಿದ್ರು.
ನಂತರ ಬ್ಯಾಂಕ್ ನಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿರುವ ಟಿ ಜೆ ಆಬ್ರಾಹಂ ಮೇಲೆ ಮಾನನಷ್ಟ ಮೊಕದ್ದಮೆ ಹಾಕುವುದು ಖಚಿತ ಎಂದು ಪ್ರಮೋದ್ ಮಧ್ವರಾಜ್ ಪುನರುಚ್ಚಿಸಿದರು.ನಾನು ಆರ್ ಟಿ ಐ ಮೂಲಕ ಮಾಹಿತಿ ಕಲೆ ಹಾಕುತ್ತಿದ್ದೇನೆ, ದೆಹಲಿಯ ಹಣಕಾಸು ಇಲಾಖೆ ಯಿಂದ ಕಡತ ಬಂದ ತಕ್ಷಣ ಮಾನನಷ್ಟ ಮೊಕದ್ದಮೆ ಕೇಸ್ ಹಾಕುತ್ತೇನೆ ಎಂದು ತಿಳಿಸಿದರು. ಟಿ.ಜೆ ಅಬ್ರಾಹಂ ಸುಪ್ರೀಂ ಕೋರ್ಟಿಂದ ದಂಡ ಹಾಕಿಸಿಕೊಂಡ ವ್ಯಕ್ತಿ, ಬೆಂಗಳೂರಿನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದವರು. ನನ್ನ ದಾಖಲೆಗಳು ಸಮರ್ಪಕವಾಗಿದ್ದು ಯಾವುದೇ ರೀತಿ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಪ್ರಮೋದ್ ಮಧ್ವರಾಜ್ ದೆಹಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದಾರೆ ಎಂಬ ವದಂತಿಯನ್ನು ಅಲ್ಲಗೆಳೆದ ಅವರು ಆಸ್ಕರ್ ಫೆರ್ನಾಂಡೀಸ್ ರನ್ನು ಬೇಟಿಯಾಗಲು ದೆಹಲಿಗೆ ಹೋಗಿದ್ದೆ, ಬಿಜೆಪಿ ವರಿಷ್ಟರನ್ನು ಬೇಟಿಯಾದೆ ಅನ್ನೋದು ಬರೇ ಸುಳ್ಳು ವದಾಂತಿ ಎಂದು ತಿಳಿಸಿದರು, ಈ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲೇ ಅತೀ ಹೆಚ್ಚು ಅಂತರದಲ್ಲಿಚುನಾವಣೆ ಗೆಲ್ಲುತ್ತೇನೆ ಎಂದು ಹೇಳಿದ ಅವರು ಕಾಂಗ್ರೇಸ್ ಪಕ್ಷಕ್ಕೆಂದೂ ದ್ರೋಹಬಗೆಯಲ್ಲ .ಕಾರ್ಯಕರ್ತರಿಗೆ ಮೋಸ ಮಾಡಲ್ಲ ಎಂದರು