ಮಂಗಳೂರು, ಮಾ 29: ಬಿಜೆಪಿ ಮುಖಂಡ ಸುಖಾನಂದ ಶೆಟ್ಟಿ ಕೊಲೆ ಆರೋಪಿಗಳನ್ನು ಸಾಕ್ಷಾಧಾರಗಳ ಕೊರತೆಯಿಂದ ಮಂಗಳೂರು 6 ನೇ ಜಿಲ್ಲಾ ಮತ್ತು ಸತ್ರ ಹೆಚ್ಚುವರಿ ನ್ಯಾಯಲಯ ಆರೋಪಿಗಳನ್ನು ಖುಲಾಸೆಗೊಳಿಸಿ ಮಾ 28 ರ ಬುಧವಾರ ತೀರ್ಪು ಪ್ರಕಟಿಸಿದೆ.
ಸುಖಾನಂದ ಶೆಟ್ಟಿಯನ್ನು ಮಂಗಳೂರಿನ ಕುಳಾಯಿ ಹೊನ್ನಕಟ್ಟೆಯ ಅವರ ಮಾರ್ಬಲ್ ಟ್ರೇಡ್ ಕಂಪನಿ ಅವರಣರಲ್ಲಿ ದುಷ್ಕಮಿಗಳು ಕ್ವಾಲಿಸ್ ವಾಹನದಲ್ಲಿ ಬಂದು ಅವರ ಮೇಲೆ ದಾಳಿ ಮಾಡಿ ಕೊಚ್ಚಿ ಕೊಲೆ ಮಾಡಿದ್ದರು. 2006 ಡಿ.1 ರಂದು ಈ ಘಟನೆ ನಡೆದಿದ್ದು, ಈ ಪ್ರಕರಣದಲ್ಲಿ ಒಟ್ಟು 23 ಆರೋಪಿಗಳನ್ನು ಪೊಲೀಸರು ಗುರುತಿಸಿದ್ದರು. ಅದರಲ್ಲಿ 17 ಅರೋಪಿಗಳನ್ನು ಬಂಧಿಸಲಾಗಿತ್ತು . ಇನ್ನು ಉಳಿದವರಲ್ಲಿ ಪ್ರಮುಖ ಆರೋಪಿಯಾಗಿದ್ದ ಮೂಲ್ಕಿ ರಫೀಕ್ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಹಾಗೂ ಸುಧೀರ್ ಎಂಬಾತನನ್ನು ಶಿರೂರು ಒತ್ತಿನೆಣೆ ಪರಿಸರದಲ್ಲಿ ಪೋಲಿಸರು ಎನ್ಕೌಂಟರ್ ಮಾಡಿದ್ದರು. ಇನ್ನಿಬ್ಬರು ಆರೋಪಿಗಳಾದ ಮಾಡೂರು ಇಸುಬು ಜೈಲ್ನಲ್ಲಿದ್ದು, ಇನ್ನೊಬ್ಬ ಪ್ರಮುಖ ಆರೋಪಿಯಾಗಿದ್ದ ಅಕ್ಬರ್ ಕಬೀರ್ ಗುರುಪುರದಲ್ಲಿ ಕೊಲೆಯಾಗಿದ್ದಾನೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು ಇದು ್ವರೆಗೂ ಇವರನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ತನಿಖಾ ದೃಷ್ಟಿಯಿಂದ ವಿಶೇಷ ತಂಡ ರಚಿಸಲಾಗಿತ್ತು.
ಈ ಪ್ರಕರಣದ ಆರೋಪಿಗಳಾದ ನವಾಜ್, ನೌಷದ್, ಶಾಕಿರ್, ಮೊಹ್ಮದ್ ರಫೀಕ್ ಯಾನೆ ಮೂಲ್ಕಿ ರಫೀಕ್,ಅಬ್ದುಲ್ ಖಾದರ್ ಆಲಿ, ಪಿ.ಕೆ ಅಯೂಬ್, ಮೊಹ್ಮದ್ ಅಶ್ರಫ್,ಫಾತಿಮಾ ಝೋಹರಾ, ಸಲೀಂ ಖಲಂದರ್ ಬಜಪೆ, ರೆಹಮತ್ ಖಲಂದರ್,ಅಜೀಜ್ ಯಾನೆ ಯೂರೋಪಿಯನ್ ಅಜೀಜ್, ನಿಜಾಮುದ್ದೀನ್,ಮೊಹಮ್ಮದ್ ಯಾನೆ ಸಾದಾ ಮೊಹ್ಮದ್, ಅಪ್ರೋಜ್, ನಾಸಿರ್,ಬುಲೆಟ್ ಸುಧೀರ್ ಕೊಲೆ ಪ್ರಕರಣದಲ್ಲಿ ದೋಷ ಮುಕ್ತರಾದವರು.ಒಟ್ಟು 72 ಸಾಕ್ಷಿ ವಿಚಾರಣೆ ನಡೆಸಲಾಗಿತ್ತದಾದರೂ ಕೊಲೆ ಆರೋಪವನ್ನು ಸಾಬೀತು ಪಡಿಸುವಲ್ಲಿ ಪ್ರಾಸಿಕ್ಯೂಟರ್ ವಿಫಲರಾಗಿದ್ದರು.ಅಂತಿಮವಾಗಿ ತೀರ್ಪು ಪ್ರಕಟಿಸಿದ ನ್ಯಾಯಾಲಯ ಸಾಕ್ಷಾಧಾರಗಳ ಕೊರತೆ ಆರೋಪಿಗಳನ್ನು ಖುಲಾಸೆಗೊಳಿಸಿದೆ.