ಮಂಗಳೂರು, ಮಾ 29: ಕಟೀಲಿನ ಬಿಜೆಪಿ ನಾಯಕನ ಕೊಲೆಗೆ ಸಂಚು ರೂಪಿಸಿದ್ದ ಗ್ಯಾಂಗ್ನ ಮೂವರನ್ನು ರೌಡಿ ನಿಗ್ರಹದ ಪೊಲೀಸರು, ಕಿನ್ನಿಗೋಳಿಯ ಕಡೂರು ಸಮೀಪ ಬಟ್ಟಕೋಡಿ ಶಿಬರೂರು ಬಳಿಯಲ್ಲಿ ಮಾ 29 ರ ಗುರುವಾರ ಬಂಧಿಸಿದ್ದಾರೆ. ಇವರು ಕಾರೊಂದರಲ್ಲಿ ಮಾರಕಾಸ್ತ್ರಗಳನ್ನಿಟ್ಟು ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ವೇಳೆಯಲ್ಲಿ ಪೊಲೀಸ್ ಅಧಿಕಾರಿ ನವೀನ್ ಚಂದ್ರ ಜೋಗಿ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ. ನಂತರ ಇವರನ್ನು ವಿಚಾರಣೆ ಒಳಪಡಿಸಿದಾಗ ಕಟೀಲಿನ ಬಿಜೆಪಿ ನಾಯಕನ ಕೊಲೆಗೆ ಸಂಚು ರೂಪಿಸಿದ ಮಾಹಿತಿ ಬಾಯಿ ಬಿಟ್ಟಿದ್ದಾರೆ. ಬಂಧಿತರನ್ನು ಉಳಾಯಿಬೆಟ್ಟಿನ ಪ್ರದೀಪ್ ಪೂಜಾರಿ, ಬಂಟ್ವಾಳ ಕನ್ಯಾನದ ದಿನೇಶ್ ಬೆಲ್ಚಡ, ಮುಲ್ಕಿಯ ಕಿಲ್ಪಾಡಿಯ ಶಿವ ಪ್ರಸಾದ್ ಎಂದು ಗುರುತಿಸಲಾಗಿದೆ. ಇನ್ನುಳಿದ ಮೂವರು ಪರಾರಿಯಾಗಿದ್ದಾರೆ.