ಮಂಗಳೂರು ಜೂ 11 (Daijiworld News/MSP): ನೂರುಲ್ ಹುದಾ ಯುಎಇ ಸಮಿತಿಯು ಕೋವಿಡ್-19 ಲಾಕ್ ಡೌನ್ ಸಂದರ್ಭದಲ್ಲಿ "ರೋಗಗಳ ಕಾಲದಲ್ಲಿ ಪವಿತ್ರ ಇಸ್ಲಾಂ, ಅದರ ಪ್ರಸಕ್ತಿ ಮತ್ತು ಪರಿಹಾರಗಳು" ಹಾಗೂ "ಕೋವಿಡ್-19 ನಂತರದ ಜನ ಜೀವನ, ಆರ್ಥಿಕ ಬಿಕ್ಕಟ್ಟು ಮತ್ತು ಸುಧಾರಣೆಗಳು" ಎಂಬ ವಿಷಯದಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿತ್ತು.
ದೇಶ, ವಿದೇಶಗಳ ಸುಮಾರು ನಲವತ್ತಕ್ಕೂ ಹೆಚ್ಚು ಸ್ಪರ್ಧಾರ್ತಿಗಳು ಭಾಗವಹಿಸಿದ್ದ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಹೆಚ್ಚಿನ ಶೇಖ್ ಮುಹಮ್ಮದ್ ಫೈಝಿ ಇರ್ಫಾನಿ ಅಲ್ ಅಝ್ಹರಿ - ಮುದರ್ರಿಸ್ ಜೆ. ಎಂ ಕಲ್ಲಡ್ಕ ಪ್ರಥಮ,ಆಯಿಷಾ ಎಸ್.ಎ ಇಂದಬೆಟ್ಟು ಬೆಳ್ತಂಗಡಿ ದ್ವಿತೀಯ ಸ್ಥಾನಕ್ಕೆ ಆಯ್ಕೆ ಆಗುವ ಮೂಲಕ ವಿಜೇತರಾಗಿದ್ದಾರೆ ಎಂದು ನೂರುಲ್ ಹುದಾ ಯುಎಇ ಸಮಿತಿಯ ಅಧ್ಯಕ್ಷರಾದ ಜನಾಬ್ ಶೆರೀಫ್ ಕಾವು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸಕ್ತ ಸವಾಲುಗಳನ್ನು ಎದುರಿಸಲು ಚಿಂತಕರ ಚಿಂತನೆಗಳು ಪರಿಣಾಮಕಾರಿಯಾಗಿರುತ್ತದೆ ಎಂಬ ಉದ್ದೇಶದಿಂದ ಸರ್ಧೆ ಏರ್ಪಡಿಸಲಾಗಿತ್ತು. ತೀರ್ಪುಗಾರರಾಗಿ ಅಹ್ಮದ್ ನಯೀಂ ಫೈಝಿ ಮುಕ್ವೆ, ಅನ್ವರ್ ಕೊಲ್ಪೆ ಮತ್ತು ಅಬ್ದುಲ್ ಲತೀಫ್ ಕೌಡಿಚ್ಚಾರ್, ಸಂಯೋಜಕರಾಗಿ ಅನ್ವರ್ ಮಣಿಲ, ಮುಹಮ್ಮದ್ ಅಶ್ರಫ್ ಪರ್ಲಡ್ಕ ಮತ್ತು ಅಬ್ದುಲ್ ಅಝೀಝ್ ಸೋಂಪಾಡಿ ಅವರು ಭಾಗವಹಿಸಿದ್ದರು.