ಕಾಸರಗೋಡು, ಜೂ 11 (DaijiworldNews/SM): ಗುರುವಾರದಂದು ಕಾಸರಗೋಡು ಜಿಲ್ಲೆಯಲ್ಲಿ ಹತ್ತು ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ ಜಿಲ್ಲೆಯಲ್ಲಿ ಗುರುವಾರದಂದು ಅರು ಮಂದಿ ಗುಣಮುಖರಾಗಿದ್ದಾರೆ.
ಬುಧವಾರ ಒಂದೂ ಪಾಸಿಟಿವ್ ಪ್ರಕರಣ ದಾಖಲಾದ ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಹತ್ತು ಮಂದಿಗೆ ಕೊರೋನಾ ಪಾಸಿಟಿವ್ ದ್ರಢಪಟ್ಟಿದ್ದು, ಈ ಪೈಕಿ ಎಂಟು ಮಂದಿ ಮಹಾರಾಷ್ಟ್ರ ಹಾಗೂ ಇಬ್ಬರು ವಿದೇಶದಿಂದ ಬಂದವರಾಗಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 104ಕ್ಕೆ ತಲುಪಿದೆ. ಕುಂಬಳೆ 4, ಮಂಗಲ್ಪಾಡಿ 2, ಪೈವಳಿಕೆ, ಕೋಡೋ ಬೇಳೂರು, ವಳಿಯಪರಂಬ, ಉದುಮ ಗ್ರಾಮ ಪಂಚಾಯತ್ ವ್ಯಾಪ್ತಿಯ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ.
ಇನ್ನು ಈ ನಡುವೆ ಆರು ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇಬ್ಬರು ಮೀ0ಜ ಹಾಗೂ ಉಳಿದವರು ಕಾಸರಗೋಡು, ಪೈವಳಿಕೆ, ಮಂಗಲ್ಪಾಡಿ ನಿವಾಸಿಗಳು ಗುಣಮುಖರಾದವರಲ್ಲಿ ಒಳಗೊಂಡಿದ್ದಾರೆ. ಜಿಲ್ಲೆಯಲ್ಲಿ ಕುಂಬಳೆ ಪಂಚಾಯತ್ ನಲ್ಲಿ ಅತ್ಯಧಿಕ 20, ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 12 ಮಂದಿ ಸೋಂಕಿತರಿದ್ದಾರೆ.