ಮಂಗಳೂರು, ಜೂ. 11 (DaijiworldNews/SM): ದ.ಕ. ಜಿಲ್ಲೆಯಲ್ಲಿ ಗುರುವಾರದಂದು ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. 45 ವರ್ಷದ ಮಹಿಳೆ, 33ವರ್ಷದ ಪುರುಷನಲ್ಲಿ ಸೋಂಕು ಪತ್ತೆಯಾಗಿದೆ.
ಮಹಾರಾಷ್ಟ್ರದಿಂದ ಬಂದಿರುವ 48 ವರ್ಷದ ಗಂಡಸಿನಿಂದ ಮಹಿಳೆಗೆ ಸೋಂಕು ಹರಡಿದೆ. ಮಹಾರಾಷ್ಟ್ರದಿಂದ ಬಂದಿದ್ದ ವ್ಯಕ್ತಿಯಲ್ಲಿ ಜೂನ್ 4ರಂದು ಸೋಂಕು ಪತ್ತೆಯಾಗಿತ್ತು. ಇನ್ನು ಇಂದು ಸೋಂಕು ಪತ್ತೆಯಾದ ಮತ್ತೊಬ್ಬ 33 ವರ್ಷದ ವ್ಯಕ್ತಿ ಪುಣೆಯಿಂದ ಮಂಗಳೂರಿಗೆ ಬಂದವರಾಗಿದ್ದಾರೆ. ಇಬ್ಬರಿಗೂ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಎಂಟು ಮಂದಿ ಗುಣಮುಖ:
ಈ ನಡುವೆ ಜಿಲ್ಲೆಯಲ್ಲಿ ಗುರುವಾರದಂದು ಎಂಟು ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 6 ಮಂದಿ ಪುರುಷರು, ಓರ್ವ ಮಹಿಳೆ ಸೇರಿ 15 ವರ್ಷದ ಬಾಲಕಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಧುಮೇಹ ಮತ್ತು ತೀವ್ರ ರಕ್ತದೊತ್ತಡದಿಂದ ಬಳಲುತ್ತಿರುವ ಹಿನ್ನಲೆ ಈ ಹಿಂದೆ ಆಸ್ಪತ್ರೆ ದಾಖಲಾಗಿದ್ದ 50 ವರ್ಷದ ವ್ಯಕ್ತಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.