ಕಾಸರಗೋಡು, ಜೂ 12 (DaijiworldNews/SM): ಲಾಕ್ ಡೌನ್ ಸಂದರ್ಭದಲ್ಲಿ ಅಕ್ರಮ ಮದ್ಯ ಮತ್ತು ಮಾದಕ ವಸ್ತು ವಿರುದ್ಧ ಅಬಕಾರಿ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿದ್ದು, ಗುರುವಾರ ವಿವಿಧೆಡೆಗಳಿಂದ 27 ಲೀಟರ್ ವಿದೇಶ ಮದ್ಯ ಹಾಗೂ 100 ಲೀಟರ್ ಹುಳಿ ರಸವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಬದಿಯಡ್ಕ ಅಬಕಾರಿ ವಲಯ ಅಧಿಕಾರಿಗಳು ನಡೆಸಿದ ದಾಳಿಯಿಂದ ಪೆರಿಯಡ್ಕ ಕಾಲನಿಯಿಂದ ಅನಿಶ್ ಎಂಬಾತನ ಮನೆ ಹಿತ್ತಿಲಿನಿಂದ ಮಾರಾಟಕ್ಕೆ ದಾಸ್ತಾನಿಡಲಾಗಿದ್ದ 27 ಲೀಟರ್ ವಿದೇಶಿ ಮದ್ಯವನ್ನು ವಶಪಡಿಸಿಕೊಂಡಿದ್ದು, ಅನಿಶ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಹೊಸದುರ್ಗ ವಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 100 ಲೀಟರ್ ಹುಳಿ ರಸವನ್ನು ವಶಪಡಿಸಿಕೊಳ್ಳಲಾಗಿ. ಸತೀಶ್ ಎಂಬಾತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.