ಕುಂದಾಪುರ, ಜೂ 12 (DaijiworldNews/SM): ಗ್ರಾಮೀಣ ಮಕ್ಕಳ ಶಿಕ್ಷಣದ ಕನಸಿಗೆ ಆಧಾರವಾಗಿ ನಿಲ್ಲುವ ಮೂಲಕ ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಮಾರ್ಗದರ್ಶಿಯಾಗಿದ್ದಾರೆ. ವಿದ್ಯಾರ್ಥಿಗಳ 70 ಲಕ್ಷ ರುಪಾಯಿ ಫೀಸ್ ಮನ್ನಾ ಮಾಡುವ ಮೂಲಕ ಶಾಸಕ ಸುಕುಮಾರ್ ಶೆಟ್ಟಿ ರಾಜ್ಯಕ್ಕೆ ಮಾದರಿಯಾಗಿದ್ದಾರೆ.
ವಿದ್ಯಾರ್ಥಿಗಳ ಶುಲ್ಕ ಮನ್ನಾ ಮಾಡುವ ಮೂಲಕ ಕೊರೊನಾದಿಂದ ಕಂಗೆಟ್ಟಿದ್ದ ವಿದ್ಯಾರ್ಥಿಗಳ ಪೋಷಕರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಸುಕುಮಾರ್ ಶೆಟ್ಟಿ ಆಡಳಿತದ ಕುಂದಾಪುರ ಎಜುಕೇಶನ್ ಸೊಸೈಟಿ, ತನ್ನ ಅಧೀನದಲ್ಲಿರುವ ಐದು ಶಿಕ್ಷಣ ಸಂಸ್ಥೆಗಳ ಬಡಮಕ್ಕಳಿಗೆ ಫೀಸ್ ಮನ್ನಾ ಭಾಗ್ಯ ನೀಡಿದೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ನಮ್ಮ ಶಿಕ್ಷಣ ಸಂಸ್ಥೆಯ ಗುರಿ ಇರುವುದು ಗ್ರಾಮೀಣ ಮಕ್ಕಳ ಅಭ್ಯುದಯ. ಶಿಕ್ಷಣದ ಮೂಲಕ ಗ್ರಾಮಗಳ ಸಬಲೀಕರಣಕ್ಕೆ ನಾವು ಯತ್ನಿಸುತ್ತಿದ್ದೇವೆ. ಒಂದೂವರೆ ಕೋಟಿ ರುಪಾಯಿಗೂ ಅಧಿಕ ಶುಲ್ಕ ಮಕ್ಕಳಿಂದ ಬರಲು ಬಾಕಿ ಇದೆ. ಆದರೆ ನಾವು ಯಾರಿಗೂ ಒತ್ತಡ ಹೇರುವುದಿಲ್ಲ. ಎಲ್ಲರ ಪರಿಸ್ಥಿತಿಯು ಸದ್ಯ ಕೆಟ್ಟುಹೋಗಿದೆ.
ತೀರಾ ಕಷ್ಟದಲ್ಲಿರುವ ಕುಟುಂಬಗಳನ್ನು ಗುರುತಿಸಿ ಫೀಸ್ ಮಾಫಿ ಮಾಡಿದ್ದೇನೆ. ಎಲ್ಲಾ ಶಿಕ್ಷಣ ಸಂಸ್ಥೆಗಳು ಈ ರೀತಿ ಬಡವರ ಬಗ್ಗೆ ಯೋಚಿಸಬೇಕು ಎನ್ನುವುದು ನನ್ನ ಆಸೆ ಎಂದ ಅವರು, ಶಿಕ್ಷಣ ಕ್ಷೇತ್ರಗಳ ವ್ಯಾಪಾರಿಕರಣ ಸರಿಯಲ್ಲ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ಹೇಳಿಕೆ