ಮೆಕ್ಸಿಕೊದ ಪ್ಯುಬೆಲಾ ರಾಜ್ಯದ ರಬೊಸೊ ನಗರದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ 139 ಮಂದಿ ಸಾವನ್ನಪ್ಪಿದ್ದಾರೆ. ಈ ಪ್ರಭಲ ಭೂಕಂಪಕ್ಕೆ ಇಡೀ ದೇಶವೇ ತತ್ತರಿಸಿ ಹೋಗಿದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಇನ್ನು ಕೂಡಾ ಸಾವಿರಾರು ಮಂದಿ ಭೀತಿಯಿಂದ ಕಟ್ಟಡಗಳಿಂದ ಹೊರಬಂದು ಬೀದಿ ಬದಿಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಭೂಕಂಪನ ಪ್ರಮಾಣ ಸುಮಾರು 7.1 ರಷ್ಟಿದ್ದು, ಭೂಕಂಪನದ ತೀವ್ರತೆಗೆ ನಗರದ ಹಲವೆಡೆ ಕಟ್ಟಡ, ಮನೆಗಳು ಧರಾಶಾಹಿಯಾಗಿವೆ. ಮೆಕ್ಸಿಕೊ ಸೇರಿದಂತೆ ಪುಯೆಬ್ಲಾ ಮತ್ತು ಮೋರ್ಲೋಸ್ ರಾಜ್ಯಗಳಲ್ಲಿ ಹೆಚ್ಚಿನ ಸಾವು ನೋವು ಸಂಭವಿಸಿದೆ. ನಗರದಲ್ಲಿ ಈಗಾಗಲೇ ೪೪ ಕಟ್ಟಡಗಳು ನೆಲಸಮವಾಗಿದೆ. ಸ್ವಯಂ ಸೇವಾ ಸಂಘಟನೆಗಳಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಇನ್ನಷ್ಟು ಸಾವು ನೋವುಗಳು ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ. ಇಲ್ಲಿ 1985ರ ಬಳಿಕ ಇದೇ ಪ್ರಭಲ ಭೂಕಂಪನವಾಗಿದೆ.