ಮಂಗಳೂರು, ಜೂ 14 (DaijiworldNews/PY) : ಪ್ರಸಕ್ತ ಕೊರೊನಾದಿಂದ ಉಂಟಾಗಿರುವಾ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಪೋಷಕರಿಂದ ಉಂಟಾಗಿರುವ ನಷ್ಟವನ್ನು ಗಮನದಲ್ಲಿಟ್ಟುಕೊಂಡು ಮಂಗಳೂರಿನ ಅಡ್ಯಾರು ಸಮೀಪದ ಬರಕಾ ಇಂಟರ್ನ್ಯಾಷನಲ್ ಸಂಸ್ಥೆಯು ತಮ್ಮ ಮಕ್ಕಳ 2020-21ನೇ ಸಾಲಿನ ಶಾಲಾ ಶುಲ್ಕದಲ್ಲಿ 33% ಕಡಿತಗೊಳಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್, ಅಕಾಡೆಮಿಕ್ ಡೈರೆಕ್ಟರ್, ಪ್ರಿನ್ಸಿಪಲ್, ಮ್ಯಾನೇಜರ್, ಪಿ.ಆರ್.ಒ ಗಳೊಂದಿಗೆ ನಡೆಸಿರುವ ಸರಣಿ ಸಭೆಗಳ ನಂತರ ಮ್ಯಾನೇಜ್ ಮೆಂಟ್ ಈ ನಿರ್ಧಾರ ಕೈಗೊಂಡಿದೆ.
ಈ ಬಗ್ಗೆ ಮಾತನಾಡಿರುವ ಸಂಸ್ಥೆಯ ಅಧ್ಯಕ್ಷ ಮಹಮ್ಮದ್ ಅಶ್ರಫ್ ಅವರು, ಈ ನಿರ್ಧಾರವು ಸಂಸ್ಥೆಗೆ ದೊಡ್ಡ ಹೊರೆಯಾಗಿದ್ದರೂ ಕೂಡಾ ಪೋಷಕರ ಪ್ರಸಕ್ತ ಪರಿಸ್ಥಿತಿಗೆ ಸ್ಪಂದಿಸುವ ಸಲುವಾಗಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.