ಮಂಗಳೂರು, ಜೂ 15 (Daijiworld News/MSP): ಕೊರೊನಾ ಲಾಕ್ ಡೌನ್ ನಿಂದ ಭಾರತಕ್ಕೆ ಮರಳಲು ಸಾಧ್ಯವಾಗದ ವಿದೇಶದಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಕರೆತರಲು ಕರ್ನಾಟಕ ಸರ್ಕಾರ ಸಾಕಷ್ಟು ಕೆಲಸ ಮಾಡುತ್ತಿದೆ. ಆದರೆ ಪ್ರಸ್ತುತ ವಿದೇಶದಲ್ಲಿ ಸಿಲುಕಿರುವ ರಾಜ್ಯದ ಜನರಿಗೆ ಇದು ಸಹಾಯ ಮಾಡಿದ್ದರೂ ಸಹ, ರಾಜ್ಯ ಸರ್ಕಾರ ಕುವೈತ್ ಕನ್ನಡಿಗರ ವಿಚಾರದಲ್ಲಿ ಮಾತ್ರ ಯಾಕೋ ನಿರಾಸಕ್ತಿ ತಳೆದಿದೆ.
ಸಾಂದರ್ಭಿಕ ಚಿತ್ರ
ಕಳೆದ ಕೆಲವು ವಾರಗಳಲ್ಲಿ ಈಗಾಗಲೇ ಸುಮಾರು ಹತ್ತು ವಿಮಾನಗಳು ಕೇರಳಿಗರನ್ನು ಹೊತ್ತು ಕುವೈತ್ನಿಂದ ಹಾರಾಟ ನಡೆಸಿ ಕೇರಳ ತಲುಪಿದೆ. ಇದಲ್ಲದೆ ಆಂಧ್ರಪ್ರದೇಶ, ತಮಿಳುನಾಡು, ತೆಲಂಗಾಣ ಮತ್ತು ಮಧ್ಯಪ್ರದೇಶ ಸಹಿತ ಆಯಾ ರಾಜ್ಯ ಭಾರತೀಯರನ್ನು ಕರೆತರಲು ಶ್ರಮಿಸಿದೆ.
ಆದರೆ ಇಲ್ಲಿಯವರೆಗೆ ಕನ್ನಡಿಗರನ್ನು ಕುವೈತ್ನಿಂದ ಮಂಗಳೂರಿಗೆ ಕರೆತರಲು ಒಂದು ವಿಮಾನವೂ ಸಹ ನಿಗದಿಯಾಗಿಲ್ಲ ಎನ್ನುವುದು ವಿಪರ್ಯಾಸ. ಈ ಮೊದಲು, ಜೂನ್ 16 ರಂದು ಕುವೈತ್ನಿಂದ ನಗರಕ್ಕೆ ವಿಮಾನ ಹಾರಾಟ ನಡೆಸಲು ಯೋಜಿಸಲಾಗಿತ್ತಾದರೂ ಆದರೆ ಬಳಿಕ ಅದೂ ರದ್ದುಗೊಂಡಿದೆ.
ಇತರ ದೇಶಗಳಿಂದ ಕನ್ನಡಿಗರನ್ನು ಮರಳಿ ಕರೆತರುವ ಪ್ರಯತ್ನಿಸುತ್ತಿರು ಕರ್ನಾಟಕದ ಎನ್ಆರ್ಐ ಫೋರಂನ ಮಾಜಿ ಅಧ್ಯಕ್ಷ ಡಾ.ಅರತಿ ಕೃಷ್ಣ, ಕುವೈತ್ನಿಂದ ಭಾರತೀಯ ರಾಯಭಾರ ಕಚೇರಿಯು ಕುವೈತ್ನಿಂದ ಮಂಗಳೂರಿಗೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಕಾರಣವನ್ನು ನೀಡಿದೆ. ಆದ್ದರಿಂದ, ಇಲ್ಲಿಯವರೆಗೆ ವಿಮಾನ ಸೇವೆ ದೊರಕಲಿಲ್ಲ. ಹೀಗಾಗಿ ರಾಜ್ಯ ಸರ್ಕಾರವು ವಿಶೇಷ ಆಸಕ್ತಿ ವಹಿಸಿ ಕುವೈತ್ -ಬಹ್ರೇನ್ ಮೂಲಕ ಮಂಗಳೂರಿಗೆ ವಿಮಾನ ಹಾರಾಟ ನಡೆಸಲು ಆಸಕ್ತಿ ತೋರಬೇಕು " ಎಂದು ಅವರು ಸಲಹೆ ನೀಡಿದರು.
ಕುವೈತ್ನಿಂದ ಎನ್ಆರ್ಐ ಉದ್ಯಮಿ ಮೋಹನ್ದಾಸ್ ಕಾಮತ್ ಮಾತನಾಡಿ, ಕುವೈತ್ನಿಂದ ಇತರ ರಾಜ್ಯಗಳಿಗೆ ವಿಮಾನಯಾನ ವ್ಯವಸ್ಥೆ ಮಾಡಲಾಗಿದೆ ಆದರೆ ಕರ್ನಾಟಕಕ್ಕೆ ಒಂದೇ ಒಂದು ವಿಮಾನವನ್ನು ಯೋಜಿಸಲಾಗಿಲ್ಲ. ಇಲ್ಲಿಂದ ಕಾಯುತ್ತಿರುವ ಜನರಿಗೆ ಮನೆಗೆ ಮರಳಲು ವಿಮಾನ ವ್ಯವಸ್ಥೆ ಮಾಡುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಒತ್ತಾಯಿಸಲಾಗಿದೆ ಎಂದು ಅವರು ಹೇಳಿದರು.