ಕಾಸರಗೋಡು, ಜೂ. 15 (DaijiworldNews/SM): ಜಿಲ್ಲೆಯ ಮಂಜೇಶ್ವರದ ಮಹಿಳೆ ಸೇರಿದಂತೆ ಜಿಲ್ಲೆಯಲ್ಲಿ ಸೋಮವಾರ ಮೂವರಲ್ಲಿ ಕೊರೋನಾ ದ್ರಢಪಟ್ಟಿದ್ದು, ನಾಲ್ವರು ಗುಣಮುಖರಾಗಿದ್ದಾರೆ. ಇಬ್ಬರು ವಿದೇಶದಿಂದ ಹಾಗೂ ಓರ್ವ ಕೊಲ್ಕತ್ತಾದಿಂದ ಬಂದವರಿಗೆ ಸೋಂಕು ಪತ್ತೆಯಾಗಿದೆ.
ಜೂನ್ 9ರಂದು ಕುವೈಟ್ ನಿಂದ ಬಂದಿದ್ದ ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಿಳೆ, ಜೂನ್ 3ರಂದು ಅಬುದಾಬಿಯಿಂದ ಬಂದಿದ್ದ ಮುಳಿಯಾರು ನಿವಾಸಿ ಹಾಗೂ ಜೂನ್ 10ರಂದು ಕೊಲ್ಕತ್ತಾದಿಂದ ಬಂದಿದ್ದ ಬೇಡಡ್ಕ ಪಂಚಾಯತ್ ನಿವಾಸಿಯಲ್ಲಿ ಸೋಂಕು ದ್ರಢಪಟ್ಟಿದೆ.
ನಾಲ್ವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿದ್ದ ಕುಂಬಳೆಯ ಎಂಟು ವರ್ಷದ ಬಾಲಕ ಮತ್ತು 39 ವರ್ಷದ ವ್ಯಕ್ತಿ ಹಾಗೂ ಪಡನ್ನಕ್ಕಾಡ್ ಕೋವಿಡ್ ಕೇಂದ್ರದಲ್ಲಿ ಚಿಕಿತ್ಸೆಯಲ್ಲಿದ್ದ ಪಡನ್ನ ಮತ್ತು ಕಾಸರಗೋಡು ನಗರಸಭಾ ವ್ಯಾಪ್ತಿಯ ನಿವಾಸಿ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ 3196 ಮಂದಿ ನಿಗಾದಲ್ಲಿದ್ದು, 342 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.