ಮಂಗಳೂರು, ಜೂ.16 (DaijiworldNews/MB) : ಕೊರೊನಾ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಆರೋಪಿಸಿ ವಿವಿಧ ಬೇಡಿಕೆಯ ಈಡೇರಿಕೆಗೆ ಆಗ್ರಹಿಸಿ ಸಿಪಿಐಎಂ ಪಕ್ಷದಿಂದ ಮಂಗಳವಾರ ಬೆಳಗ್ಗೆ ದ.ಕ. ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಯಿತು.
ಆಹಾರ ಧಾನ್ಯಗಳ ವಿತರಣೆ,ನೇರ ನಗದು ವರ್ಗಾವಣೆ,ಕಾರ್ಮಿಕರಿಗೆ ವೇತನ, ಕೆಲಸದ ಭದ್ರತೆ, ಉದ್ಯೋಗ ಖಾತ್ರಿ ಯೋಜನೆ ವಿಸ್ತರಣೆ,ಸಾರ್ವಜನಿಕ ಉದ್ದಿಮೆಗಳ ರಕ್ಷಣೆ ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಈ ಪ್ರತಿಭಟನೆ ನಡೆಸಲಾಗಿದ್ದು ಬಳಿಕ ಜಿಲ್ಲಾಧಿಕಾರಿಯ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಸುನೀಲ್ ಕುಮಾರ್ ಬಜಾಲ್, ಜೆ. ಬಾಲಕೃಷ್ಣ ಶೆಟ್ಟಿ, ಹಾಗೂ ಮುಖಂಡರಾದ ದಯಾನಂದ ಶೆಟ್ಟಿ, ಸಂತೋಷ್ ಬಜಾಲ್, ಭಾರತಿ ಬೋಳಾರ್, ನವೀನ್ ಕೊಂಚಾಡಿ, ಜಯಂತಿ ಬಿ., ಸುರೇಶ್ ಬಜಾಲ್ ಭಾಗಿಯಾಗಿದ್ದರು.