ಏ 02: ಬಿಜೆಪಿ ಅಧ್ಯಕ್ಷ ಅಮಿತ್ ಅವರ ಕರ್ನಾಟಕ ಪ್ರವಾಸವನ್ನು ಮುಂದೂಡಲಾಗಿದೆ. ಈ ಹಿಂದಿನ ನಿರ್ಧಾರಿತ ವೇಳಾಪಟ್ಟಿಯಂತೆ ಎರಡು ದಿನಗಳ ಪ್ರವಾಸದಲ್ಲಿ ಶಾ ಅವರು ಬೆಳಗಾವಿ, ಬಾಗಲಕೋಟೆ, ಹಾವೇರಿ ಜಿಲ್ಲೆಗಳಿಗೆ ಭೇಟಿ ನೀಡಬೇಕಾಗಿತ್ತು. ಆದರೆ ಇದೀಗ ಅವರ ಎರಡು ದಿನಗಳ ಪ್ರವಾಸವನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಸಂಸತ್ತಿನಲ್ಲಿ ಇಂದು ವಿಪಕ್ಷಗಳು ಸಿಜೆಐ ದೀಪಕ್ ಮಿಶ್ರಾ ವಿರುದ್ಧ ಮಹಾಭಿಯೋಗ ಪ್ರಸ್ತಾಪ ಮಂಡಿಸುವ ಹಿನ್ನೆಲೆಯಲ್ಲಿ ಸಂಸತ್ ಕಲಾಪದಲ್ಲಿ ಭಾಗವಹಿಸಲು ಮುಂಬೈ ಕರ್ನಾಟಕದಲ್ಲಿ ನಡೆಸಬೇಕಿದ್ದ ಎರಡು ದಿನಗಳ ಪ್ರವಾಸವನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ. ಏಪ್ರಿಲ್ 12 ,13 ಮುಂದಿನ ಪ್ರವಾಸವನ್ನು ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.