ಮಂಗಳೂರು ಸೆ20:ನಾಳೆಯಿಂದ ನವರಾತ್ರಿ ಸಂಭ್ರಮ. ಆದರೆ ಈ ಸಂಭ್ರಮವನ್ನು ಅನುಭವಿಸಲು ಮಾತ್ರ ಶಾಲಾ ಮಕ್ಕಳಿಗೆ ಸಾಧ್ಯವಾಗಿರಲಿಲ್ಲ. ಕಾರಣ ನವರಾತ್ರಿ ರಜೆ ಸರಕಾರದಿಂದ ಘೋಷಣೆಯಾಗಿದ್ದು ಅಕ್ಟೋಬರ್ ತಿಂಗಳಲ್ಲಿ. ಆದ್ರೆ ಇದೀಗ ಜಿಲ್ಲಾಡಳಿತದ ಶ್ರಮದಿಂದ ರಜೆ ನವರಾತ್ರಿಗೆ ದೊರಕಿರುವುದು ಪೋಷಕರಲ್ಲಿ ಖುಷಿ ತಂದಿದೆ.
ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ದಸರಾ ರಜೆಯನ್ನು ಸೆಪ್ಟೆಂಬರ್ 21 ರಿಂದ ಅಕ್ಟೋಬರ್ 5 ರವರೆಗೆ ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಹೀಗಾಗಿ ಕರಾವಳಿಯಲ್ಲಿ ಮಕ್ಕಳ ನವರಾತ್ರಿ ಸಂಭ್ರಮ ಮುಗಿಲು ಮುಟ್ಟಿದೆ. ಅ.6 ರಂದು ಶಾಲಾ ಕಾಲೇಜುಗಳು ಪುನರಾರಂಭಗೊಳ್ಳಲಿದೆ.
ಇನ್ನು ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾಸಂಸ್ಥೆಗಳಿಗೆ ಈ ರಜೆ ಅನ್ವಯಿಸುತ್ತದೆ. ದಸರಾ ರಜೆಯನ್ನು ನವರಾತ್ರಿ ಸಂದರ್ಭದಲ್ಲಿಯೇ ನೀಡುವಂತೆ ಸಾವ೯ಜನಿಕರ, ಶಿಕ್ಷಣ ಸಂಸ್ಥೆಗಳ ಮನವಿಗೆ ಸ್ಪಂದಿಸಿ ರಾಜ್ಯ ಸರಕಾರ ದಸರಾ ರಜೆ ಬದಲಾಯಿಸಿದೆ ಎಂದು ದ.ಕ. ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ.