ಉಡುಪಿ,ಏ : ಕಳೆದ ವರ್ಷದ ಏ 2 ರ ಮಧ್ಯರಾತ್ರಿ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಲು ತೆರಳಿದ್ದ ಉಡುಪಿ ಡಿಸಿ ಪ್ರಿಯಾಂಕ ಮೇರಿ ಪ್ರಾನ್ಸಿಸ್,ಎಸಿ ಶಿಲ್ಪಾ ನಾಗ್ ಅವರನ್ನು ಕೊಲೆ ಮಾಡಲು ಪ್ರಯತ್ನ ಪಟ್ಟ ಆರೋಪಿಗಳು ಜಾಮೀನು ಪಡೆದು ರಾಜಾರೋಷವಾಗಿ ಓಡಾಡುತ್ತಿದ್ದರೂ, ಪ್ರಕರಣದ ತನಿಖೆ ಮಾತ್ರ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಇಬ್ಬರು ಉನ್ನತ ಅಧಿಕಾರಿಗಳ ಮೇಲಿನ ಹಲ್ಲೆ ಪ್ರಕರಣದ ತನಿಖೆ ನಿಧಾನ ಗತಿಯಲ್ಲಿ ನಡೆಯುತ್ತಿರುವುದು ಅಕ್ರಮಗಳಿಗೆ ಪೊಲೀಸ್ ಅಧಿಕಾರಿಗಳಿಗೆ ಪ್ರೋತ್ಸಾಹಿಸಿದಂತಾಗಿದೆ. ತನಿಖೆ ನಡೆದು ತಪ್ಪಿಸ್ಥರಿಗೆ ಶಿಕ್ಷೆಯಾದರೆ ಅಕ್ರಮ ನಡೆಸುವವರಿಗೆ ಕಡಿವಾಣ ಹಾಕಿದಂತಾಗುತ್ತದೆ. ಇಲ್ಲವಾದಲ್ಲಿ ಪೊಲೀಸರ ಮೇಲಿನ ಹಲ್ಲೆ ಪ್ರಕರಣ ಇಷ್ಟು ನಿಧಾನ ಗತಿಯಲ್ಲಾದರೆ, ಇನ್ನು ಜನ ಸಾಮಾನ್ಯರ ಗತಿ ಏನು ಏಂದು ಜನ ಆಡಿಕೊಳ್ಳುವಂತಾಗಿದೆ .ಇನ್ನು ಪ್ರಕರಣದ ಪ್ರಗತಿಯ ಬಗ್ಗೆ ಉಡುಪಿ ಎಸ್ಪಿ ಲಕ್ಷ್ಮಣೆ ನಿಂಬರಗಿ, ಆರೋಪಿಗಳ ವಿರುದ್ದ ಚಾರ್ಜ್ಶೀಟ್ ಪರಿಶೀಲನೆಯ ಹಂತದಲ್ಲಿದೆ. ಉಡುಪಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ಪರಿಶೀಲನೆ ಬಳಿಕ ಕೇಸ್ ಸಂಖ್ಯೆ ಸಿಗಲಿದೆ. ಆ ಬಳಿಕವಷ್ಟೆ ವಿಚಾರಣೆ ನಡೆಯಲಿದೆ ಎಂದಿದ್ದಾರೆ.
ಈ ಘಟನೆ ಸಂಬಂಧ ಉಡುಪಿಯ ನಗರ ಪೊಲೀಸ್ ಠಾಣೆಯಲ್ಲಿ ಡಿಸಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು. 50 ಮಂದಿಯ ವಿರುದ್ದ ದೂರು ನೀಡಿದ್ದು, ಅವರಲ್ಲಿ 26 ಮಂದಿಯನ್ನು ಬಂಧಿಸಲಾಗಿತ್ತು. ಆ ಪೈಕಿ ಒಬ್ಬ ಬಾಲಾಪರಾಧಿಯೂ ಇದ್ದ. ಈಗ ಬಂದಿತರಾದ ಎಲ್ಲರಿಗೂ ಜಾಮೀನು ದೊರೆತಿದೆ ಪ್ರಕರಣ ಸಂಬಂಧ ಉತ್ತರ ಪ್ರದೇಶದ ಐವರನ್ನು ಗಡೀಪಾರು ಮಾಡಲು ಆದೇಶಿಸಲಾಗಿತ್ತು.