ಕಾಸರಗೋಡು, ಜೂ 17 (Daijiworld News/MSP): ಕೇರಳ ಸಾರ್ವಜನಿಕ ಶಿಕ್ಷಣ ಇಲಾಖೆಯ ಫಸ್ಟ್ ಬೆಲ್ ಆನ್ ಲೈನ್ ತರಗತಿಗಳು ಇಂದಿನಿಂದ(ಜೂ.17) ಕನ್ನಡ ಮಾಧ್ಯದಲ್ಲೂ ಲಭ್ಯವಾಗಲಿವೆ.
ಕೈಟ್ ಕಾಸರಗೋಡು ಆರಂಭಿಸಿರುವ ಯೂಟ್ಯೂಬ್ ಚಾನೆಲ್ ನಲ್ಲಿ ವಿಡಿಯೋ ತರಗತಿಗಳು ಲಭಿಸಲಿವೆ. ವಿಳಾಸ:www.youtube/c/kitekasaragod.
ಈ ಚಾನೆಲ್ ನ ಉದ್ಘಾಟನೆ ಇಂದು ಬೆಳಗ್ಗೆ 11 ಗಂಟೆಗೆ ನಡೆಯಲಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಚಾಲನೆ ನೀಡುವರು. ಬಳಿಕ ಪ್ರಸಾರ ಆರಂಭಗೊಳ್ಳಲಿದೆ. ತಲಾ ಅರ್ಧ ತಾಸಿನ ಸರಣಿಗಳು ಪ್ರತಿ ತರಗತಿಯಾಗಿ ಪ್ರಸಾರಗೊಳ್ಳುವುವು. ಪ್ರೌಢಶಾಲಾ ವಿಭಾಗದಲ್ಲಿ ಪ್ರತಿ ತರಗತಿ ತಲಾ ಪ್ರತಿ ಎರಡು ವಿಷಯಗಳಲ್ಲಿ ಪ್ರಸಾರಗೊಳ್ಳಲಿದೆ. ಪ್ರಾಥಮಿಕ ವಿಭಾಗದಲ್ಲಿ ದಿನ ಬಿಟ್ಟು ದಿನ ಹಿರಿಯ ಪ್ರಾಥಮಿಕ, ಕಿರಿಯ ಪ್ರಾಥಮಿಕ ತರಗತಿಗಳ ವಿಷಯಗಳು ಪರ್ಯಾಯ ವ್ಯವಸ್ಥೆಯಲ್ಲಿ ಪ್ರಸಾರವಾಗಲಿವೆ. ಮೊದಲ ದಿನ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ವಿಭಾಗಗಳ ತರಗತಿಗಳು ಲಭಿಸಲಿವೆ.
ಇಂದು ಬೆಳಗ್ಗೆ 11 ಗಂಟೆಗೆ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಫಿಸಿಕ್ಸ್, 11.30ಕ್ಕೆ ಕೆಮೆಸ್ಟ್ರಿ, ಮಧ್ಯಾಹ್ನ 12 ಗಂಟೆಗೆ 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಫಿಸಿಕ್ಸ್, 12.30ಕ್ಕೆ ಸೋಷ್ಯಲ್ ಸಯನ್ಸ್, ಮಧ್ಯಾಹ್ನ 1 ಗಂಟೆಗೆ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬಯೋ ಲಜಿ, 1.30ಕ್ಕೆ ಕನ್ನಡ, ಮಧ್ಯಾಹ್ನ 2 ಗಂಟೆಗೆ 5ನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತ, 2.30 ಗಂಟೆಗೆ 6 ನೇ ತರಗತಿ ವಿದ್ಯಾರ್ಥಿಗಳಿಗೆ ಕನ್ನಡ ಬಿ.ಟಿ., 3 ಗಂಟೆಗೆ 7ನೇ ತರಗತಿ ವಿದ್ಯಾ ರ್ಥಿಗಳಿಗೆ ಬೇಸಿಕ್ ಸಯನ್ಸ್ ಪ್ರ ಸಾರಗೊಳ್ಳಲಿದೆ. 3.30 ರಿಂದ ತರಗತಿಗಳ ಪುನರ್ ಪ್ರಸಾರ ನಡೆಯಲಿದೆ.
ಈ ಕುರಿತ ವೀಡಿಯೋ ತರಗತಿಗಳ ನಿರ್ಮಾಣ(ಚಿತ್ರೀಕರಣ) ಕೈಟ್ ನ ಕಾಸರಗೋಡು ಜಿಲ್ಲಾ ಕಚೇರಿಯಲ್ಲಿ ನಡೆಯುತ್ತಿದೆ. ಸಮಗ್ರ ಶಿಕ್ಷಣ ಕೇರಳ, ಡಯಟ್ ಕಾಸರಗೋಡುಗಳ ಅಕಾಡೆಮಿಕ್ ಬೆಂಬಲದೊಂದಿಗೆ ಈ ಚಟುವಟಿಕೆಗಳು ನಡೆಯುತ್ತಿವೆ. . ಜಿಲ್ಲೆಯಎಲ್ಲಾ ಕೇಬಲ್ ನೆಟ್ ವರ್ಕ್ ನಲ್ಲೂ ಈ ಚಾನೆಲ್ ಲಭಿಸಲಿದೆ