ಮಂಗಳೂರು, ಜೂ 17(Daijiworld News/MSP) : ಕೊರೊನಾ ಕಾರಣದಿಂದ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಂದೇ ಭಾರತ್ ಮಿಷನ್ನ ಅಡಿಯಲ್ಲಿ, ದೇಶಕ್ಕೆ ಕರೆತರುವ ನಿರಂತರ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ.
ಕುವೈತ್ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರು
ಭಾರತೀಯರನ್ನು ಮರಳಿ ಪ್ರಯತ್ನದಲ್ಲಿ ವಿಶೇಷ ಮತ್ತು ಚಾರ್ಟರ್ಡ್ ವಿಮಾನಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿರುವುದರಿಂದ, ದೇಶದ ಪ್ರಮುಖ ವಿಮಾನ ನಿಲ್ದಾಣಗಳಲ್ಲಿನ ಕಾರ್ಯನಿರತವಾಗಿದೆ.
ಇದೀಗ ಜೂನ್ 17 ರ ಬುಧವಾರ, ಕುವೈತ್ನಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಜೀರಾ ಏರ್ವೇಸ್ ವಿಮಾನ ಬರಲಿದೆ. ಇದು ಕುವೈತ್ನಿಂದ ಕರ್ನಾಟಕಕ್ಕೆ ಮೊದಲ ಖಾಸಗಿ ವಿಮಾನ ಹಾರಾಟವಾಗಲಿದೆ. ಸಂಜೆ 5 ಗಂಟೆಗೆ ವಿಮಾನವು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.
ಜೂನ್ 14 ರಂದು ಕುವೈಟ್ನ ಆಯಿಲ್ ಆಂಡ್ ಗ್ಯಾಸ್ ಸಂಸ್ಕರಣಾಗಾರವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಪ್ರಾಣ ಕಳೆದುಕೊಂಡ ಸತೀಶ್ ಕೊಚು ಶೆಟ್ಟಿ (45) ಅವರ ಮೃತದೇಹವೂ ಇದೇ ವಿಮಾನದಲ್ಲಿ ಬರಲಿದೆ.
ಕುವೈಟ್ನಲ್ಲಿರುವ ಕನ್ನಡ ಮತ್ತು ತುಳು ಸಂಘಗಳಿಂದಾಗಿ ವಿಮಾನದಲ್ಲಿ 160 ಪ್ರಯಾಣಿಕರನ್ನು ಭಾರತಕ್ಕೆ ವಾಪಸ್ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ ಎಂದುತಿಳಿದುಬಂದಿದೆ.
ಏತನ್ಮಧ್ಯೆ, ಎಲ್ಲಾ ಪ್ರಯಾಣಿಕರಿಗೆ ಕಡ್ಡಾಯವಾಗಿ ಕ್ಯಾರೆಂಟೈನ್ ಆದೇಶದಂತೆ, ಕುವೈತ್ ವಿಮಾನ ನಿಲ್ದಾಣದಲ್ಲಿ ಈಗಾಗಲೇ ಏಳು ದಿನಗಳ ಕಾಲ ಹೋಟೆಲ್ ಬುಕ್ಕಿಂಗ್ ಮಾಡಲಾಗಿದೆ ಎಂದು ತಿಳಿದುಬಂದಿದೆ.