ಕಾಸರಗೋಡು, ಜೂ 10 (DaijiworldNews/SM): ಜಿಲ್ಲೆಯಲ್ಲಿ ಬುಧವಾರ 9 ಮಂದಿಗೆ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಆದರೆ, ಯಾರ ವರದಿಯೂ ಕೂಡ ಕೋವಿಡ್ ನೆಗೆಟಿವ್ ಆಗಿಲ್ಲ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ.
ಸೋಂಕು ಖಚಿತಗೊಂಡವರಲ್ಲಿ 7 ಮಂದಿ ವಿದೇಶಗಳಿಂದ ಬಂದವರಾಗಿದ್ದಾರೆ. ಇಬ್ಬರು ಮಹಾರಾಷ್ಟ್ರ ದಿಂದ ಮರಳಿದವರು ಎಂಬ ಮಾಹಿತಿ ನೀಡಿದ್ದಾರೆ.
ಕುವೈತ್ ನಿಂದ ಆಗಮಿಸಿದ್ದ ನೀಲೇಶ್ವರ ನಗರಸಭೆ ವ್ಯಾಪ್ತಿಯ 46 ವರ್ಷದ ನಿವಾಸಿ, ಈಸ್ಟ್ ಏಳೇರಿ ಪಂಚಾಯತ್ ನ 23 ವರ್ಷದ ನಿವಾಸಿ, ಬಳಾಲ್ ಪಂಚಾಯತ್ ನ 39 ವರ್ಷದ ನಿವಾಸಿ, ದುಬೈನಿಂದ ಆಗಮಿಸಿದ್ದ ಕಾಞಂಗಾಡ್ ನಗರಸಭೆ ವ್ಯಾಪ್ತಿಯ 26 ಹಾಗೂ 49 ವರ್ಷದ ನಿವಾಸಿಗಳು, ಕುಂಬಳೆ ಪಂಚಾಯತ್ ನ 47 ವರ್ಷದ ನಿವಾಸಿ, ಬಹರೈನ್ ನಿಂದ ಬಂದಿದ್ದ ಪಳ್ಳಿಕ್ಕರೆ ಪಂಚಾಯತ್ ನ 34 ವರ್ಷದ ನಿವಾಸಿಯಲ್ಲಿ ಸೋಂಕು ಪತ್ತೆಯಾಗಿದೆ. ಮಹಾರಾಷ್ಟ್ರದಿಂದ ಬಂದಿದ್ದ ಮಂಜೇಶ್ವರ ಪಂಚಾಯತ್ ನ 68 ವರ್ಷದ ನಿವಾಸಿ, ತ್ರಿಕರಿಪುರ ಪಂಚಾಯತ್ ನ 51 ವರ್ಷದ ನಿವಾಸಿಯಲ್ಲಿ ರೋಗ ಸಾಬೀತಾದವರು.
ಜಿಲ್ಲೆಯಲ್ಲಿ 3641 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ 3328 ಮಂದಿ, ಸಾಂಸ್ಥಿಕ ನಿಗಾದಲ್ಲಿ 313 ಮಂದಿ ಇದ್ದಾರೆ. 476 ಮಂದಿಯ ತಪಾಸಣೆ ಫಲಿತಾಂಶ ಲಭಿಸಿಲ್ಲ. ನೂತನವಾಗಿ 94 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 255 ಮಂದಿ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.