ಮಂಗಳೂರು, ಜೂ 18 (Daijiworld News/MSP): ಮಂಗಳೂರು ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಚಾರ್ಜ್ ಶೀಟ್ಗಳನ್ನು ಮಂಗಳೂರಿನ 2ನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಗೋಲಿಬಾರ್ಗೆ ಫಟಗೆ ಸಂಬಂಧಿಸಿದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮೂರು ಪ್ರಕರಣ, ದಕ್ಷಿಣ ಠಾಣೆಯಲ್ಲಿ 13 ಪ್ರಕರಣ ದಾಖಲಾಗಿತ್ತು. ಮುಖ್ಯ ಪ್ರಕರಣ ಸೇರಿದಂತೆ ಮೂರು ಪ್ರಕರಣಗಳನ್ನು ಸಿಐಡಿಗೆ ಹಸ್ತಾಂತರಿಸಲಾಗಿತ್ತು.
ಇವುಗಳಲ್ಲಿ ಒಂದು ಪ್ರಕರಣದ ಚಾರ್ಜ್ ಶೀಟ್ನ್ನು ಸಿಐಡಿಯು ನ್ಯಾಯಾಲಯಕ್ಕೆ ಮಾರ್ಚ್ ತಿಂಗಳಲ್ಲೇ ಸಲ್ಲಿಕೆ ಮಾಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಇನ್ನೂ 2 ಪ್ರಕರಣಗಳ ಚಾರ್ಜ್ ಶೀಟ್ ಸಲ್ಲಿಕೆ ಬಾಕಿಯಿದೆ.
ಒಟ್ಟು 600ಕ್ಕೂ ಅಧಿಕ ಪುಟಗಳ ಚಾರ್ಜ್ ಶೀಟ್ ಇದಾಗಿದ್ದು, ಉಳಿದಂತೆ ಮಂಗಳೂರು ದಕ್ಷಿಣ ಠಾಣೆಯಲ್ಲಿ ದಾಖಲಾಗಿದ್ದ 13 ಪ್ರಕರಣಗಳ ಪೈಕಿ ಮೂರು ಪ್ರಕರಣಗಳ ಕುರಿತ ಆರೋಪ ಪಟ್ಟಿಯನ್ನು 10 ದಿನಗಳ ಹಿಂದಷ್ಟೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಸಲ್ಲಿಕೆಯಾದ ಚಾರ್ಜ್ ಶೀಟ್ಗಳಲ್ಲಿ ಒಟ್ಟು 464 ಮಂದಿಯ ಹೆಸರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ ಎಂದು ತಿಳಿದುಬಂದಿದೆ. ಉಳಿದೆಲ್ಲಾ ಪ್ರಕರಣಗಳ ತನಿಖೆ ಬಹುತೇಕ ಪೂರ್ಣಗೊಂಡಿದೆ.