ಕಾಸರಗೋಡು, ಜೂ 18 (DaijiworldNews/SM): ಜಿಲ್ಲೆಯಲ್ಲಿ ಗುರುವಾರ ಕೂಡಾ ಮೂವರಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟಿದೆ. 11 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಇದರಿಂದ ಸೋಂಕಿತರ ಸಂಖ್ಯೆ 206ಕ್ಕೆ ತಲಪಿದೆ. ಈ ನಡುವೆ 108 ಮಂದಿ ಸದ್ಯ ಚಿಕಿತ್ಸೆಯಲ್ಲಿದ್ದಾರೆ. ಉದುಮ, ಚೆಂಗಳ, ಪಡನ್ನ ನಿವಾಸಿಗಳಲ್ಲಿ ಗುರುವಾರ ಸೋಂಕು ಪತ್ತೆಯಾಗಿದೆ. ಮೂವರು ವಿದೇಶದಿಂದ ಬಂದವರಾಗಿದ್ದಾರೆ.3682 ಮಂದಿ ನಿಗಾದಲ್ಲಿದ್ದು, ಈ ಪೈಕಿ 331 ಮಂದಿ ಐಸೋಲೇಷನ್ ವಾರ್ಡ್ ನಲ್ಲಿದ್ದಾರೆ.
ಜಿಲ್ಲೆಯಲ್ಲಿ ಮೂರನೇ ಹಂತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 206 ಕ್ಕೆ ತಲಪಿದೆ. ಮೊದಲ ಹಂತದಲ್ಲಿ ಒಂದು, ಎರಡನೇ ಹಂತದಲ್ಲಿ 178 ಸೋಂಕಿತರಿದ್ದ ಜಿಲ್ಲೆ ಇದೀಗ ಮೂರನೇ ಹಂತದಲ್ಲಿ 200ರ ಗಡಿ ದಾಟಿದೆ. ಎರಡನೇ ಹಂತದಲ್ಲಿ ಬಹುತೇಕ ಮಂದಿಗೆ ಸಂಪರ್ಕದಿಂದ ಸೋಂಕು ದ್ರಢಪಟ್ಟರೆ, ಮೂರನೇ ಹಂತದಲ್ಲಿ ಬಹುತೇಕ ಮಂದಿ ವಿದೇಶ ಹಾಗೂ ಹೊರರಾಜ್ಯಗಳಿಂದ ಬಂದವರಾಗಿದ್ದಾರೆ.
126 ಮಂದಿ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಉಳಿದಂತೆ 63 ಮಂದಿ ವಿದೇಶದಿಂದ ಬಂದವರಲ್ಲಿ ಸೋಂಕು ದೃಢಪಟ್ಟಿರುವಂತಹದು. ಉಳಿದ ರಾಜ್ಯಗಳಿಂದ ಬಂದ ಆರು ಮಂದಿಗೆ ಸೋಂಕು ದೃಢಪಟ್ಟಿದೆ. 11 ಮಂದಿಗೆ ಸಂಪರ್ಕದಿಂದ ಸೋಂಕು ತಗಲಿದೆ.ಇದುವರೆಗೆ ಜಿಲ್ಲೆಯಲ್ಲಿ 384 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 276 ಮಂದಿ ಗುಣಮುಖರಾಗಿದ್ದು, 108 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.