ಕಾಸರಗೋಡು, ಏ 02: ಕತ್ತಿಯಿಂದ ಕತ್ತು ಕೊಯ್ದು ಚಿಕ್ಕಮಗಳೂರಿನ ಯುವಕನೋರ್ವ ಹಾಡಹಗಲೇ ಸಾರ್ವಜನಿಕರ ಕಣ್ಮುಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ಕಾಸರಗೋಡು ನಗರ ಹೊರವಲಯದ ಚೆರ್ಕಳ ಪಾಣಲಂ ಎಂಬಲ್ಲಿ ನಡೆದಿದೆ.ಮೃತರನ್ನು ಚಿಕ್ಕಮಗಳೂರಿನ ಹರೀಶ್ (30) ಎಂದು ಗುರುತಿಸಲಾಗಿದೆ . ಸೋಮವಾರ ಮಧ್ಯಾಹ್ನ ಚೆರ್ಕಳ ಪಾಣಲಂ ನಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿ ಕಬ್ಬಿನ ಹಾಲು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತಲಪಿದ ಹರೀಶ್ ಅಲ್ಲಿದ್ದ ಕತ್ತಿ ತೆಗೆದು ಸ್ವಲ್ಪ ಮುಂದೆ ಓಡಿ ತನ್ನ ಕತ್ತನ್ನು ಕೊಯ್ದಿದ್ದು , ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ .ಕೃತ್ಯಕ್ಕೆ ಕಾರಣ ತಿಳಿದು ಬಂದಿಲ್ಲ . ವಿದ್ಯಾನಗರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ಆರಂಭಿಸಿದ್ದು , ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿ ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಯುವಕನ ಕಿಸೆಯಲ್ಲಿದ್ದ ಗುರುತು ಚೀಟಿಯ ಸಹಾಯದಿಂದ ಈತನ ಗುರುತು ಪತ್ತೆಹಚ್ಚಲಾಯಿತು. ಈತ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ ಎನ್ನಲಾಗಿದೆ . ಕೃತ್ಯಕ್ಕೆ ಕಾರಣ ತಿಳಿದುಬಂದಿಲ್ಲ ಎಂದು ವಿದ್ಯಾನಗರ ಠಾಣಾ ಪೊಲೀಸರು ತಿಳಿಸಿದ್ದಾರೆ.