ಕುಂದಾಪುರ, ಜೂ 19 (Daijiworld News/MSP): ಕುಂದಾಪುರ ಉಪ ವಿಭಾಗ ವ್ಯಾಪ್ತಿಯರುವ ಸಾಮಿಲ್ ಮಾಲಕರ ಸಂಘದ ವತಿಯಿಂದ ಕೋವಿಡ್ -19 ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.5 ಲಕ್ಷಗಳ ದೇಣಿಗೆಯನ್ನು ಅರಣ್ಯ ಇಲಾಖೆಯ ಮುಖಾಂತರ ಹಸ್ತಾಂತರಿಸಲಾಯಿತು.


ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶಿಶ್ ರೆಡ್ಡಿ ಎಂ.ವಿ ದೇಣಿಗೆಯನ್ನು ಸ್ವೀಕರಿಸಿ, ಕೋವಿಡ್-19 ಮಹಾಮಾರಿ ಜನಜೀವನವನ್ನೆ ಅತಂತ್ರಗೊಳಿಸುತ್ತಿದೆ. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಸಾಮಿಲ್ ಮಾಲಕರು ದೇಣಿಗೆ ನೀಡುತ್ತಿರುವುದು ಅಭಿನಂದನೀಯ. ಸಹಕಾರ ಮನೋಭಾವ ಎಲ್ಲರಲ್ಲಿಯೂ ಇರಬೇಕು. ಇನ್ನೊಬ್ಬರ ನೋವಿಗೂ ಸ್ಪಂದಿಸುವ ಮನಸ್ಥಿತಿ ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕು .
ಈ ಪ್ರಕೃತಿಯಲ್ಲಿ ನಾವು ಮಾತ್ರವಲ್ಲ, ಎಲ್ಲಾ ಜೀವರಾಶಿಗಳು ಇವೆ. ಪ್ರಕೃತಿಯಲ್ಲಿ ನಮಗೆ ಇರುವಷ್ಟೇ ಅವಕಾಶ ಇತರ ಜೀವರಾಶಿಗಳಿಗೂ ಇದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಾಮಿಲ್ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಕುಂದಾಪುರ, ಬ್ರಹ್ಮಾವರ, ಉಡುಪಿ, ಕಾರ್ಕಳ, ಮೂಡಬಿದ್ರೆಯ ಸದಸ್ಯರು ಉಪಸ್ಥಿತರಿದ್ದರು. ಪತ್ರಾಂಕಿತ ವ್ಯವಸ್ಥಾಪಕ ಉದಯಕುಮಾರ್ ಟಿ ಕಾರ್ಯಕ್ರಮ ನಿರ್ವಹಿಸಿ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ ಕುಲಾಲ್ ವಂದಿಸಿದರು.