ಕಾಸರಗೋಡು, ಜೂ 19 (DaijiworldNews/SM): ಶುಕ್ರವಾರವೂ ಜಿಲ್ಲೆಯಲ್ಲಿ ನಾಲ್ವರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ನಾಲ್ವರು ಗುಣಮುಖರಾಗಿದ್ದಾರೆ.

ಈಗ 108 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಶುಕ್ರವಾರ ಸೋಂಕು ದ್ರಢಪಟ್ಟವರಲ್ಲಿ ಇಬ್ಬರು ವಿದೇಶದಿಂದ ಹಾಗೂ ಇನ್ನಿಬ್ಬರು ಮಹಾರಾಷ್ಟ್ರದಿಂದ ಬಂದವರು. ಮೀ0ಜ, ಉದುಮ, ಚೆಮ್ನಾಡ್ ಪಂಚಾಯತ್ ವ್ಯಾಪ್ತಿಯವರಾಗಿದ್ದಾರೆ. ಇವರೆಲ್ಲಾ ನಿಗಾದಲ್ಲಿದ್ದರು.
ಚಿಕಿತ್ಸೆಯಲ್ಲಿದ್ದ ಮಂಗಲ್ಪಾಡಿ, ವಲಿಯ ಪರಂಬ, ಪುಲ್ಲೂರು-ಪೆರಿಯ, ಕಾರಡ್ಕ ನಿವಾಸಿಗಳು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 4045 ಮಂದಿ ನಿಗಾದಲ್ಲಿದ್ದಾರೆ. ಈ ಪೈಕಿ 330 ಮಂದಿ ಸಾಂಸ್ಥಿಕ ನಿಗಾದಲ್ಲಿದ್ದಾರೆ.