ಮೂಡುಬಿದಿರೆ, ಜೂ.20 (DaijiworldNews/MB) : ಮೂಡುಬಿದಿರೆ ತಾಲೂಕಿನ ಪಾಲಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಮಾರು ಹೊಂಡೆಲು ನಿವಾಸಿ ದೂಜ ಮತ್ತು ಸುಶೀಲ ಪೂಜಾರಿ ವೃದ್ಧ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಮಂಜಣ್ಣ ಸೇವಾ ಬ್ರಿಗೇಡ್ ತಂಡದಿಂದ ಶ್ರಮದಾನ ಮಾಡಲಾಯಿತು.


ಮಂಜಣ್ಣ ಸೇವಾ ಬ್ರಿಗೇಡ್ನ ನಿತೇಶ್ ಸನಿಲ್, ಗೌರವ ಸಲಹೆಗಾರರು ನಾಗೇಶ್ ಶೆಟ್ಟಿ ತೋಕೂರು, ಬಜರಂಗದಳ ಸುರತ್ಕಲ್ ಸಂಚಾಲಕರು ಸುನಿಲ್ ತೋಕೂರು, ಬಿರ್ವೆರ್ ಕುಡ್ಲ ಬಜಪೆಯ ಅಧ್ಯಕ್ಷರು ಪ್ರಶಾಂತ್ ಕಾನ, ಪ್ರಮೋದ್ ಶೆಟ್ಟಿ ತೋಕೂರು, ಗೌತಮ್ ಕೋಡಿಕೆರೆ, ಶರತ್ ಜೆ ಬಿ ಎಫ್, ಪವನ್ ಶೆಟ್ಟಿ ಕೊಡೆತ್ತುರು, ನಿಶಾಂತ್ ತೋಕೂರು, ಗಣೇಶ್ ಕಳವಾರ್ ಸೇರಿದಂತೆ ಮಂಜಣ್ಣ ಸೇವಾ ಬ್ರಿಗೇಡ್ನ ಹಲವು ಸದಸ್ಯರು ಈ ಶ್ರಮದಾನದಲ್ಲಿ ಭಾಗಿಯಾಗಿದ್ದರು.