ಮೈಸೂರು, ಏ 03 : ಚಾಮುಂಡೇಶ್ವರಿ ಕ್ಷೇತ್ರವಾದ ಮೈಸೂರಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸೋದೇ ನನ್ನ ಗುರಿ ಎಂದು ಮಾಜಿ ಸಚಿವ ವಿ. ಶ್ರೀನಿವಾಸ ಪ್ರಸಾದ್ ಪುನರುಚ್ಚಿಸಿದ್ದಾರೆ. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಸೋಲಿಸೋದೆ ನನ್ನ ಗುರಿ. ಅದರ ಮಾರ್ಗೋಪಾಯವನ್ನು ಈಗಾಗಲೇ ತಿಳಿಸಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ನಾವು ಅಭ್ಯರ್ಥಿ ಹಾಕಲೇ ಬೇಕಾಗುತ್ತೆ. ಅಭ್ಯರ್ಥಿ ಹಾಕುತ್ತೇವೆ. ಆದರೆ, ಯಾರು ಗೆಲ್ಲುತ್ತಾರೆ ಎಂದು ಈಗ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಅವರ ವಿರುದ್ಧ ತಮ್ಮ ತಂತ್ರಗಾರಿಕೆಯನ್ನು ಗುಟ್ಟಾಗಿಯೇ ಉಳಿಸಿದರು.
ಸೋಲಿಸೋದು ನನ್ನ ಗುರಿ. ಅದು ಹೇಗೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟ್ರೀಯ ಪಕ್ಷ. ನಾವು ಅಭ್ಯರ್ಥಿ ಹಾಕಲೇ ಬೇಕಾಗುತ್ತೆ. ಅಭ್ಯರ್ಥಿ ಹಾಕುತ್ತೇವೆ. ಆದರೆ, ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂದು ಈಗ ಹೇಳಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಸಿದ್ದರಾಮಯ್ಯ ಅವರ ವಿರುದ್ಧದ ತಮ್ಮ ಯೋಚನೆಗಳನ್ನು ಗುಟ್ಟಾಗಿಯೇ ಉಳಿಸಿದರು. ಇದೇ ವೇಳೆ ಈ ಬಾರಿ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಹಾವ ಭಾವವೇ ಅವರಿಗೆ ಮುಳುವಾಗುತ್ತೆ ಎಂದು ಎಚ್ಚರಿಸಿದರು.