ಬಂಟ್ವಾಳ, ಜೂ 20 (DaijiworldNews/PY) : ಮೀಯಪದವು ಶಾಲೆಯ ಶಿಕ್ಷಕಿ ರೂಪಶ್ರೀ ಹತ್ಯೆ ಪ್ರಕರಣ ಹಿನ್ನೆಲೆ, ಆರೋಪಿ ಶಿಕ್ಷಕ ಹಾಗೂ ಚಾಲಕನಿಗೆ ಹೈಕೋರ್ಟ್ ಷರತ್ತು ಬದ್ದ ಜಾಮೀನು ನೀಡಿದೆ.

ಮೀಯಪದವು ಶಾಲೆಯ ಶಿಕ್ಷಕಿ ರೂಪಶ್ರೀ (42) ಹತ್ಯೆ ಆರೋಪಿ ವೆಂಕಟ್ರಮಣ ಕಾರಂತ (42) ಹಾಗೂ ಕಾರು ಚಾಲಕ ನಿರಂಜನ (22) ಅವರಿಗೆ ತಲಾ ಒಂದು ಲಕ್ಷ ರೂ. ಬಾಂಡ್ನೊಂದಿಗೆ ಇಬ್ಬರಿಗೆ ಜಾಮೀನು ನೀಡಿದ್ದು, ವಿಚಾರಣೆ ಮುಗಿಯುವವರೆಗೆ ಜಿಲ್ಲೆ ಬಿಟ್ಟು ಹೊರ ಹೋಗುವಂತಿಲ್ಲ ಎಂದು ತಿಳಿಸಿದೆ.
ಜನವರಿ 16ರಂದು ಶಿಕ್ಷಕಿ ರೂಪಾಶ್ರೀ ಅವರನ್ನು ಉಸಿರುಗಟ್ಟಿಸಿ ಹತ್ಯೆಗೈದು ಮಂಜೇಶ್ವರ ಬಳಿ ಸಮುದ್ರಕ್ಕೆ ಎಸೆಯಲಾಗಿತ್ತು. ಎರಡು ದಿನಗಳ ಬಳಿಕ ಮೃತದೇಹ ಪತ್ತೆಯಾಗಿತ್ತು.