ಕಾಸರಗೋಡು, ಜೂ.21 (DaijiworldNews/MB) : ಜಿಲ್ಲೆಯಲ್ಲಿ ಶನಿವಾರ ಏಳು ಮಂದಿಗೆ ಸೋಂಕು ದೃಢಪಟ್ಟಿದ್ದು, ಆರು ಮಂದಿ ವಿದೇಶ ಹಾಗೂ ಓರ್ವ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.

ಸೋಂಕಿತರಲ್ಲಿ ಮಂಗಲ್ಪಾಡಿ ಇಬ್ಬರು, ವರ್ಕಾಡಿ, ಚೆಂಗಳ, ಪಳ್ಳಿಕೆರೆ , ಅಜನೂರು, ಕಾರಡ್ಕ ಗ್ರಾಮ ಪಂಚಾಯತ್ ವ್ಯಾಪ್ತಿಯವರಾಗಿದ್ದಾರೆ.
ಇನ್ನು ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೆ 285 ಮಂದಿಗೆ ಸೋಂಕು ತಗಳಿದ್ದು, ಈ ಪೈಕಿ 113 ಮಂದಿ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 4,313 ಮಂದಿ ನಿಗಾದಲ್ಲಿದ್ದು, ಈ ಪೈಕಿ 343 ಮಂದಿ ಐಸೋಲೇಷನ್ ವಾರ್ಡ್ನಲ್ಲಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ 10,852 ಮಂದಿಯನ್ನು ತಪಾಸಣೆ ನಡೆಸಲಾಗಿದ್ದು, ಈ ಪೈಕಿ 9,826 ಮಂದಿಯ ವೈದ್ಯಕೀಯ ವರದಿ ನೆಗಟಿವ್ ಆಗಿದೆ. 395 ಮಂದಿಯಲ್ಲಿ ಪಾಸಿಟಿವ್ ಆಗಿದ್ದು, 347 ಮಂದಿಯ ಫಲಿತಾಂಶ ಇನ್ನು ಲಭಿಸಬೇಕಿದೆ.
ಮೂರನೇ ಹಂತದಲ್ಲಿ ತಪಾಸಣೆ ನಡೆಸಿದ 5946 ಮಂದಿಯಲ್ಲಿ 217 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.