ಮಂಗಳೂರು, ಜೂ 21 (DaijiworldNews/PY) : ಕೊಟ್ಟಾರಚೌಕಿ ಬಳಿಯ ನೆಕ್ಕಿಲಗುಡ್ಡೆ ಪ್ರದೇಶದಲ್ಲಿ ಕಾರ್ಪೊರೇಟರ್ ಶಶಿಧರ ಹೆಗ್ಡೆ ಅವರು ಸ್ಥಳೀಯ ಸಾರ್ವಜನಿಕರಿಗೆ ಸೊಳ್ಳೆ ಪರದೆ ವಿತರಿಸಿದರು.




ಈ ಸಂದರ್ಭ ಮಾತನಾಡಿದ ಅವರು, ಕೊರೊನಾ ವೈರಸ್ ನಡುವೆ ಡೆಂಗ್ಯೂ, ಮಲೇರಿಯಾ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿದೆ. ಇದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯಡಿ ಸೊಳ್ಳೆ ಪರದೆ ವಿತರಿಸಲಾಗುತ್ತಿದೆ. ಸಾರ್ವಜನಿಕರು ಕೊರೊನಾ ಹರಡುವಿಕೆ ತಡೆಯುವುದರ ಜೊತೆಗೆ ಡೆಂಗ್ಯೂ, ಮಲೇರಿಯಾ ಹರಡದಂತೆ ಮುಂಜಾಗ್ರತೆ ವಹಿಸಬೇಕು ಎಂದು ಮನವಿ ಮಾಡಿದರು.
ಸುಮಾರು 250ಕ್ಕೂ ಮಿಕ್ಕಿ ಕುಟುಂಬಗಳಿಗೆ ಸೊಳ್ಳೆ ಪರದೆ ವಿತರಿಸಿದರು.
ಈ ಸಂದರ್ಭ, ಯತೀಶ್ ದೋಟ ಹೌಸ್ ,ಕೃಷ್ಣ ನೆಕ್ಕಿಲ,ಭಾಸ್ಕರ್ ನೆಕ್ಕಿಲ, ದೇವರಾಜ್ ದೇವಾಡಿಗ ನೆಕ್ಕಿಲ ಮತ್ತಿತರರು ಉಪಸ್ಥಿತರಿದ್ದರು.