ಕಾಸರಗೋಡು, ಜೂ 21 (DaijiworldNews/SM): ಮಹಾರಾಷ್ಟ್ರದಿಂದ ಬಂದ ಏಳು ವರ್ಷದ ಬಾಲಕ ಸೇರಿದಂತೆ ಜಿಲ್ಲೆಯಲ್ಲಿ ರವಿವಾರ ಆರು ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.

ಮೇ 23 ರಂದು ಕಾರಿನಲ್ಲಿ ಮಹಾರಾಷ್ಟ್ರದಿಂದ ಬಂದ ಮಂಗಲ್ಪಾಡಿ ಪಂಚಾಯತ್ ನ ಏಳು ವರ್ಷದ ಬಾಲಕ, ಜೂನ್ 5 ರಂದು ರೈಲಿನಲ್ಲಿ ಬಂದ ಮಂಗಲ್ಪಾಡಿ ನಿವಾಸಿಗಳಾದ ತಂದೆ ಮತ್ತು ಮಗಳಿಗೆಗೆ ಸೋಂಕು ದೃಢಪಟ್ಟಿದೆ.
ಜೂನ್ 13ರಂದು ದುಬೈಯಿಂದ ಬಂದ ಪಳ್ಳಿಕೆರೆ, ಜೂನ್ 12 ರಂದು ಕುವೈಟ್ ನಿಂದ ಬಂದ ಚೆಂಗಳ, ಜೂನ್ 11 ರಂದು ಕುವೈಟ್ ನಿಂದ ಬಂದ ಮಂಗಲ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ವ್ಯಕ್ತಿಗಳಿಗೆ ಸೋಂಕು ತಗಲಿದೆ.
ಶನಿವಾರ ಏಳು ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಮೂವರು ವಿದೇಶದಿಂದ ಹಾಗೂ ಮೂವರು ಮಹಾರಾಷ್ಟ್ರದಿಂದ ಬಂದವರಲ್ಲಿ ಸೋಂಕು ಪತ್ತೆಯಾಗಿತ್ತು.