ಮಂಗಳೂರು, ಜೂ 21 (DaijiworldNews/SM): ದ.ಕ. ಜಿಲ್ಲೆಯಲ್ಲಿ ರವಿವಾರದಂದು ಮತ್ತೆ ಏಳು ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆದರೆ, ಇಂದು ಉಡುಪಿ ಜಿಲ್ಲೆ ನಿರಾಳವಾಗಿದೆ. ಉಡುಪಿಯಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ.

ದ.ಕ. ಜಿಲ್ಲೆಯಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಮೂವರು ಕುವೈಟ್ ನಿಂದ ಮರಳಿದವರಾಗಿದ್ದಾರೆ. ಇನ್ನುಳಿದಂತೆ ರೋಗಿ ಸಂಖ್ಯೆ 6619 ವ್ಯಕ್ತಿಯ ಸಂಪರ್ಕದಿಂದ ಇಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಪುತ್ತೂರಿನ ಒಬ್ಬರಿಗೆ ಐಎಲ್ ಐನಿಂಡ ಸೋಂಕು ದೃಢಪಟ್ಟರೆ, ಬೆಳ್ತಂಗಡಿ ನಿವಾಸಿಯೊಬ್ಬರಿಗೆ ಎಸ್ ಆರ್ ಐನಿಂದ ಸೋಂಕು ತಗುಲಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿ ರವಿವಾರದಂದು ಸ್ವಲ್ಪ ನಿರಾಳಾರಾಗುವ ಸುದ್ದಿ ಲಭ್ಯವಾಗಿದೆ. ಜಿಲ್ಲೆಯಲ್ಲಿ ರವಿವಾರದಂದು ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ. ಈ ನಡುವೆ ಜಿಲ್ಲೆಯಲ್ಲಿ 12 ಮಂದಿ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸದ್ಯ ಜಿಲ್ಲೆಯಲ್ಲಿ 97 ಆಕ್ಟಿವ್ ಪ್ರಕರಣಗಳಿವೆ. ಇನ್ನು ಜಿಲ್ಲೆಯಲ್ಲಿ ಒಟ್ಟು ಪತ್ತೆಯಾದ 1061 ಮಂದಿ ಸೋಂಕಿತರ ಪೈಕಿ ಸದ್ಯ 965 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ನಡುವೆ ರವಿವಾರದಂದು 27 ಮಂದಿಯ ವರದಿ ಲಭ್ಯವಾಗಿದ್ದು, ಎಲ್ಲಾ ವರದಿಗಳು ನೆಗೆಟಿವ್ ಆಗಿವೆ.