ಕಾಸರಗೋಡು,ಜೂ 22 (Daijiworld News/MSP): ಅಬಕಾರಿ ಸಿಬಂದಿಗಳನ್ನು ಗಮನಿಸಿ ಮದ್ಯ ಒಳಗೊಂಡ ಬೈಕನ್ನು ತೊರೆದು ಸಹೋದರರಿಬ್ಬರು ಪರಾರಿಯಾದ ಘಟನೆ ಮಂಜೇಶ್ವರ ಸಮೀಪದ ಕೊಳವಯಲ್ ಎಂಬಲ್ಲಿ ಭಾನುವಾರ ನಡೆದಿದೆ.

ಬೈಕ್ ನಿಂದ ಭಾರೀ ಪ್ರಮಾಣದ ಮದ್ಯ ವಶಕ್ಕೆ ತೆಗೆದುಕೊಳ್ಳಲಾಗಿದೆ. ಕರ್ನಾಟಕದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದರು ಎನ್ನಲಾಗಿದೆ. ಕುಂಬಳೆ ಅಬಕಾರಿ ದಳದ ಸಿಬಂದಿಗಳ ವಾಹನ ಕಂಡ ಕೂಡಲೇ ಬೈಕನ್ನು ಬಿಟ್ಟು ಇಬ್ಬರು ಪರಾರಿಯಾಗಿದ್ದಾರೆ.
ಘಟನೆಗೆ ಸಂಬಂಧಪಟ್ಟಂತೆ ಜೋನ್ ಮತ್ತು ವಾಲ್ಟರ್ ಡಿ’ಸೋಜ ವಿರುದ್ಧ ಕೇಸು ದಾಖಲಿಸಲಾಗಿದೆ