ಏ 4: ಕ್ಯಾಲಿಫೋರ್ನಿಯಾದ ಸ್ಯಾನ್ ಬರ್ನೋದಲ್ಲಿರುವ ಯೂಟ್ಯೂಬ್ ಕಚೇರಿ ಮೇಲೆ ಶೂಟೌಟ್ ನಡೆದಿದೆ. ಇದು ಯೂಟ್ಯೂಬ್ ನ ಪ್ರಧಾನ ಕಚೇರಿಯಾಗಿದ್ದೂ ಘಟನೆಯಲ್ಲಿ ಹಲವರಿಗೆ ಗಾಯಗಳಿಗೆ ಎಂದು ವರದಿಯಾಗಿದೆ, ಘಟನೆಯಿಂದ ಇಡೀ ಕಚೇರಿಯೇ ಅಲ್ಲೋಲ ಕಲ್ಲೋಲವಾಗಿದೆ.ಮಂಗಳವಾರ ರಾತ್ರಿ 12.45ರ ವೇಳೆಗೆ ನುಗ್ಗಿದ ಮುಸುಕುಧಾರಿ ಮಹಿಳೆಯೊಬ್ಬರು ಮನಬಂದಂತೆ ಗುಂಡಿನ ದಾಳಿ ನಡೆಸಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.
ಮುಸುಕುಧಾರಿ ಮಹಿಳೆ ಕಚೇರಿಯ ಒಳ ಪ್ರವೇಶಿಸುತ್ತಿದ್ದಂತೆಯೇ ಏಕಾಏಕಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾಳೆ. ಇದರಿಂತ ಭೀತಿಗೊಳಗಾದ ಸಿಬ್ಬಂದಿಗಳೂ ಕೂಡಲೇ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಆದರೆ ಸುದ್ದಿ ತಿಳಿಯುತ್ತಿದ್ದಂತೆಯೇ ಭದ್ರತಾ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದ್ದಾರೆ . ಆದರೆ ಆದಾಗಲೇ ಆ ಮಹಿಳೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾಳೆಂದು ವರದಿಗಳು ತಿಳಿಸಿವೆ. ಗಾಯಾಳುಗಳನ್ನು ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.