ಕಾರ್ಕಳ, ಜೂ 22 (Daijiworld News/MSP): ತಂಪು ಪಾನೀಯ ಫ್ಯಾಕ್ಟರಿಯೊಂದರಲ್ಲಿ ವಿದ್ಯುತ್ ಆಘಾತದಿಂದ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಕಾರ್ಕಳದ ಸಮೀಪದ ಮುಂಡ್ಲಿಯಲ್ಲಿ ನಡೆದಿದೆ.

ಮೃತರನ್ನು ಸಾಂತ್ರಬೆಟ್ಟು ರತ್ನ ವರ್ಮ ಜೈನ್(48) ಎಂದು ಗುರುತಿಸಲಾಗಿದೆ.
ಫ್ಯಾಕ್ಟರಿಯಲ್ಲಿ ಜನರೇಟರ್ ಸ್ಥಗಿತಗೊಳಿಸುವ ಸಂದರ್ಭದಲ್ಲಿ ವಿದ್ಯುತ್ ಅಘಾತಕ್ಕೊಳಗಾಗಿ ಸ್ಥಳದಲ್ಲೇ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ರತ್ನವರ್ಮ ಜೈನ್ ಅವರು ಕಂಬಳ ಪ್ರೇಮಿಯಾಗಿದ್ದು , ಕಂಬಳ ಕ್ಷೇತ್ರದಲ್ಲಿ ಹಲವು ಸಾಧನೆಗಳನ್ನು ಮಾಡಿ ಸ್ಥಳೀವಾಗಿ ಗುರುತಿಸಲ್ಪಟ್ಟಿದ್ದರು