ಧರ್ಮಸ್ಥಳ, ಜೂ 23 (Daijiworld News/MSP): ದೇವರ ಮೀನುಗಳ ತಾಣ ಇತಿಹಾಸ ಪ್ರಸಿದ್ಧ ಮತ್ಸ್ಯ ಕ್ಷೇತ್ರ ಶಿಶಿಲೇಶ್ವರ ದೇವಸ್ಥಾನದಲ್ಲಿ ಮೀನುಗಳನ್ನು ಕಳ್ಳತನ ಮಾಡುತ್ತಿದ್ದ ಮಸೀದಿಯ ಧರ್ಮಗುರು ಸಹಿತ 7 ಮಂದಿಯನ್ನು ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದ ಜೂ. 22 ರ ಸೋಮವಾರ ಸಂಜೆ ನಡೆದಿದೆ.
ಶ್ರೀ ಶಿಶಿಲೇಶ್ವರ ದೇವಾಲಯದ ದೇವರ ಕೆರೆಯಲ್ಲಿ ಮೀನುಗಳನ್ನು ರಾತ್ರಿ ವೇಳೆ ಕದ್ದು ಕೊಂಡೊಯ್ಯಲಾಗುತ್ತಿತ್ತು. ಈ ಬಗ್ಗೆ ಸ್ಥಳೀಯ ಹಿಂದೂ ಜಾಗರಣ ವೇದಿಕೆ ಸಂಘಟನೆ ರಾತ್ರಿ ವೇಳೆ ಕಾರ್ಯಾಚರಣೆ ನಡೆಸಲು ಕಾದು ಕುಳಿತಿತ್ತು. ಅದರಂತೆ ಸೋಮವಾರ ರಾತ್ರಿ ಕಳ್ಳರು ಮೀನು ಕಳ್ಳತನಕ್ಕೆ ಬಂದ ವೇಳೆ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅರಸಿನಮಕ್ಕಿ ಮಸೀದಿಯ ಧರ್ಮಗುರು ಸಹಿತ 7 ಮಂದಿ ಸೆರೆಸಿಕ್ಕಿದ್ದು ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.