ಮಂಗಳೂರು, ಜೂ.24 (DaijiworldNews/MB) : ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿದ ವೃದ್ಧನ ಅಂತ್ಯ ಸಂಸ್ಕಾರಕ್ಕಾಗಿ ಸಾಮಾನ್ಯ ಜನರಂತೆ ಶಾಸಕ ಯು ಟಿ ಖಾದರ್ ಅವರು ಗುಂಡಿ ತೋಡಿದ್ದು ಇದೀಗ ಶಾಸಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಬೆಂಗಳೂರಿನಿಂದ ಬಂದಿದ್ದ 70 ವರ್ಷದ ವೃದ್ಧ ಕೊರೊನಾ ಸೋಂಕಿಗೆ ಮಂಗಳವಾರ ಬಲಿಯಾಗಿದ್ದು ವೃದ್ಧನ ಅಂತ್ಯ ಸಂಸ್ಕಾರವನ್ನು ಮಂಗಳೂರಿನ ಬೋಳಾರದ ಜುಮಾ ಮಸೀದಿಯ ಸ್ಮಶಾನದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಯು ಟಿ ಖಾದರ್ರವರು ಕೂಡಾ ಗುಳಿ ತೋಡಿದ್ದಾರೆ.
ಇನ್ನು ಪಿಪಿಇ ಕಿಟ್ ಧರಿಸದೆಯೇ ಶಾಸಕ ಖಾದರ್ ಅವರು ಅಂತ್ಯ ಸಂಸ್ಕಾರದಲ್ಲಿ ಭಾಗಿಯಾದ ಕಾರಣ ತೀವ್ರ ವಿರೋಧವೂ ವ್ಯಕ್ತವಾಗಿದೆ.