ಮಂಗಳೂರು, ಜೂ 24(DaijiworldNews/PY) : ದಕ್ಷಿಣ ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದ ಮಹಿಳೆಯೋರ್ವರು ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಒಟ್ಟು ಮೃತರ ಸಂಖ್ಯೆ 10 ಕ್ಕೆ ಏರಿಕೆಯಾಗಿದೆ.
ಕೊವೀಡ್ ಆಸ್ಪತ್ರೆಗೆ ಮಂಗಳವಾರ ತಾನೇ ದಾಖಲಾಗಿದ್ದ ಉಳ್ಳಾಲದ ಅಝಾದ್ ನಗರದ 57 ವರ್ಷದ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇವರು ಕಳೆದ ಎಂಟು ದಿನಗಳ ಹಿಂದೆ ಭೇದಿಯ ಕಾರಣದಿಂದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಗಂಟಲ ದ್ರವ ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದ್ದು ವೆನ್ಲಾಕ್ ಕೋವಿಡ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಇಂದು ಮಹಿಳೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದು ಮಹಿಳೆಗೆ ೮ ದಿನಗಳ ಕಾಲ ಚಿಕಿತ್ಸೆ ನೀಡಿದ್ದ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳಿಗೆ ಭೀತಿ ಉಂಟಾಗಿದೆ.
ಇನ್ನು ಈ ಮಹಿಳೆಗೆ ಕೊರೊನಾ ಹೇಗೆ ಬಂದಿದೆ ಎಂದು ಇನ್ನೂ ಕೂಡಾ ತಿಳಿದು ಬಂದಿಲ್ಲ. ಮಹಿಳೆಗೆ ಕೊರೊನಾ ದೃಢಪಟ್ಟ ಬಳಿಕವೇ ಮಹಿಳೆ ವಾಸವಿದ್ದ ನಿವಾಸ ಹಾಗೂ ಆ ಕೌಪೌಂಡ್ನಲ್ಲೇ ಇದ್ದ ಇನ್ನೊಂದು ಮನೆ ವಾಸವಿದ್ದವರನ್ನು ಸೇರಿ ಒಟ್ಟು 19 ಮಂದಿಯನ್ನು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು.