ಕಾಸರಗೋಡು, ಜೂ 24(Daijiworld News/MSP): ನೆಲ್ಲಿಕುಂಜೆಯ ಸಂದೀಪ್ ಸೇರಿದಂತೆ ಮೂರು ಕೊಲೆ ಪ್ರಕರಣದ ಆರೋಪಿಗಳನ್ನು ಕಾಸರಗೋಡು ಜಿಲ್ಲಾ ಹೆಚ್ಚುವರಿ ಸೆಷನ್ಸ್ ( ದ್ವಿತೀಯ ) ನ್ಯಾಯಾಲಯ ಖುಲಾಸೆ ಗೊಳಿಸಿ ಬುಧವಾರ ತೀರ್ಫು ನೀಡಿದೆ.
ಸಂದೀಪ್ ಕೊಲೆ ಪ್ರಕರಣದ ಆರೋಪಿಗಳಾದ ಪೊವ್ವಲ್ ನ ಮುಹಮ್ಮದ್ ರಫೀಕ್ ( 35), ಕೋಟೆ ರಸ್ತೆಯ ಶಹಾಲ್ ಖಾನ್ ( 35) , ಚೆಂಗಳ ನಾಲ್ಕನೇ ಮೈಲ್ ನ ಪಿ . ಎ ಅಬ್ದುಲ್ ರಹಮಾನ್ (48), ವಿದ್ಯಾನಗರದ ಎ . ಎ ಅಬ್ದುಲ್ ಸತ್ತಾರ್ ( 42) , ಅಣಂಗೂರಿನ ಶಬೀರ್ ( 36), ಉಳಿಯತ್ತಡ್ಕದ ಮುಹಮ್ಮದ್ ರಾಫಿ (40) , ಚೆಂಗಳ ತೈ ವಳಪ್ಪಿನ ಕೆ . ಎಂ ಅಬ್ದುಲ್ ಅ ಸ್ಲಾಂ ( 38) ಉಳಿಯತ್ತಡ್ಕದ ಎಂ . ಹಾರಿಸ್ ( 38) ರನ್ನು ಖುಲಾಸೆ ಗೊಳಿಸಲಾಗಿದೆ .
9 ಮಂದಿ ಆರೋಪಿಗಳಲ್ಲಿ ಎಂಟು ಮಂದಿಯನ್ನು ಹಾಜರು ಪಡಿಸಿದ್ದು, ಇನ್ನೋರ್ವ ಆರೋಪಿಯ ವಿಚಾರಣೆ ಮುಂದಿನ ದಿನಗಳಲ್ಲಿ ನಡೆಯಲಿದೆ. 2008 ರ ಏಪ್ರಿಲ್ 14 ರಂದು ರಾತ್ರಿ ಕಾಸರಗೋಡು ಹೊಸ ಬಸ್ಸು ನಿಲ್ದಾಣದ ಪರಿಸರದಲ್ಲಿ ಸಂದೀಪ್ (24) ರವರನ್ನು ಇರಿದು ಕೊಲೆಗೈಯ್ಯಲಾಗಿತ್ತು . 25 ಸಾಕ್ಷಿಗಳಲ್ಲಿ 18 ಸಾಕ್ಷಿಗಳನ್ನು ನ್ಯಾಯಾಲಯ ವಿಸ್ತರಿಸಿತ್ತು.
ಸಂದೀಪ್ ಕೊಲೆ ಬಳಿಕ ಕಾಸರಗೋಡಿನಲ್ಲಿ ನಡೆದ ಗಲಭೆಯಲ್ಲಿ ಮೂವರು ಕೊಲೆಗೀಡಾಗಿದ್ದರು. ನ್ಯಾಯವಾದಿ ಸುಹಾಸ್ , ಸಿನಾನ್ ಮತ್ತು ಮುಹಮ್ಮದ್ ಕೊಲೆಗೀಡಾಗಿದ್ದರು . ಈ ಪೈಕಿ ಸಿನಾನ್ ಕೊಲೆ ಪ್ರಕರಣದ ಆರೋಪಿಗಳನ್ನು ನ್ಯಾಯಾಲಯ ಈ ಹಿಂದೆ ಖುಲಾಸೆ ಗೊಳಿಸಿತ್ತು .
ಪೈವಳಿಕೆಯ ಅಬ್ದುಲ್ ಸತ್ತಾರ್ ಕೊಲೆ ಪ್ರಕರಣ:
2008 ರ ಡಿಸಂಬರ್ 21 ರಂದು ಪೈವಳಿಕೆಯ ಅಬ್ದುಲ್ ಸತ್ತಾರ್ ಕೊಲೆ ಪ್ರಕರಣದ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆ ಗೊಳಿಸಿದೆ. ಆರೋಪಿಗಳಾದ ಕೋಡಿ ಬೈಲ್ ನ ಮುಹಮ್ಮದ್ ಫಾರೂಕ್ , ಇಬ್ರಾಹಿಂ ಖಲೀಲ್ , ಜೈನುದ್ದೀನ್ ಖುಲಾಸೆ ಗೊಂಡವರು .
ಸಿಪಿಎಂ ಕಾರ್ಯಕರ್ತ ಅಂಬಲತ್ತರದ ನಾರಾಯಣ ಕೊಲೆ ಪ್ರಕರಣ:
2015 ರ ಆಗಸ್ಟ್ 28 ರಂದು ಸಿಪಿಎಂ ಕಾರ್ಯಕರ್ತ ಅಂಬಲತ್ತರದ ನಾರಾಯಣ ಕೊಲೆ ಪ್ರಕರಣದ ಆರೋಪಿಗಳಾದ ವಿಜಯನ್ , ಶ್ರೀನಾಥ್ , ಪುಷ್ಪರಾಜ್, ಆನಂದ್ ನನ್ನು ಜಿಲ್ಲಾ ಹೆಚ್ಚುವರಿ ಸೆಷನ್ಸ್ ( ದ್ವಿತೀಯ ) ಖುಲಾಸೆ ಗೊಳಿಸಿದೆ. ಪಕ್ಷದ ಧ್ವಜ ಕ್ಕೆ ಸಂಬಂಧಪಟ್ಟಂತೆ ಪ್ರಶ್ನಿಸಿದ್ದು , ಕೊಲೆಗೆ ಕಾರಣವಾಗಿತ್ತು
ಮೂರು ಪ್ರಕರಣಗ ಳಲ್ಲಿ ಸಾಕ್ಷ್ಯಧಾರಗಳ ಕೊರತೆಯಿಂದ ಆರೋಪಿಗಳು ಖುಲಾಸೆಗೊಂಡಿದ್ದಾರೆ